ಗುಜರಿ ಅಂಗಡಿಗೆ ಬೆಂಕಿ

14blrp4
ಪಟ್ಟಣದ ಪುರಿಬಟ್ಟಿ ಬೀದಿಯಲ್ಲಿರುವ ಗುಜರಿ ಅಂಗಡಿಗೆ ಬಿದಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
Published on

ಬೇಲೂರು: ಪಟ್ಟಣದ ಪುರಿಬಟ್ಟಿ ಬೀದಿಯಲ್ಲಿರುವ ಗುಜರಿ ಅಂಗಡಿಗೆ ಗುರುವಾರ ಸಂಜೆ ತಗಲಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸುವ ಮೂಲಕ ಭಾರಿ ಅನಾಹುತ ತಪ್ಪಿಸಿದರು.

ಲಯನ್ಸ್ ಭವನದ ಸಮೀಪವಿರುವ ಅಕ್ರಮ್ ಗುಜರಿ ಅಂಗಡಿ ವಸ್ತುಗಳಿಗೆ ಗುರುವಾರ ಸಂಜೆ ಬೆಂಕಿ ತಗುಲಿತ್ತು. ಅಂಗಡಿಯ ಹಿಂಭಾಗದಲ್ಲಿ ಶೇಖರಿಸಿದ್ದ ಪ್ಲಾಸ್ಟಿಕ್ ವಸ್ತುಗಳಿಗೂ ವ್ಯಾಪಿಸಿತು. ಅಕ್ಕಪಕ್ಕದವರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net