ಗುಂಡ್ಲುಪೇಟೆಯಲ್ಲಿ ಪೊಲೀಸರಿಂದ ಸೈಕಲ್ ಜಾಥಾ

Published on

ಗುಂಡ್ಲುಪೇಟೆ: ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಪಟ್ಟಣದ ಪೊಲೀಸರು ಭಾನುವಾರ ಸೈಕಲ್ ಜಾಥಾ ನಡೆಸಿದರು.

ರಾಷ್ಟ್ರೀಯ ಅಥ್ಲೆಟ್, ಏಕಲವ್ಯ ಪ್ರಶಸ್ತಿ ವಿಜೇತರಾದ ಸವಿತಾರಾಜ್ ಅವರ ಸಹಯೋಗದಲ್ಲಿ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಕೋಡಹಳ್ಳಿ ವೃತ್ತ, ಪ್ರವಾಸಿ ಮಂದಿರ ವೃತ್ತದ ಮೂಲಕ ಪೊಲೀಸ್ ಠಾಣೆಗೆ ವಾಪಸಾದರು. ಸರ್ಕಲ್ ಇನ್‌ಸ್ಪೆಪೆಕ್ಟರ್ ಜಯಕುಮಾರ್, ಸಹಾಯಕ ಸಬ್‌ಇನ್‌ಸ್ಪೆಪೆಕ್ಟರ್‌ಗಳಾದ ಎಂ.ಮಹೇಶ್, ಎ.ಮಹೇಶ್, ರೇವಣ್ಣಸ್ವಾಮಿ, ಸಿಬ್ಬಂದಿ ನಟೇಶ, ಬಂಟಪ್ಪ, ಬಸವರಾಜೇಂದ್ರ, ಸುನೀಲ್, ಗಣೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net