

ಗುಂಡ್ಲುಪೇಟೆ: ವೇದ ಚಲನಚಿತ್ರದ ಪ್ರಮೋಶನ್‌ಗಾಗಿ ಪಟ್ಟಣದ ಸೂರ್ಯ ಚಿತ್ರಮಂದಿರಕ್ಕೆ ಚಿತ್ರನಟ ಡಾ.ಶಿವರಾಜ್ ಕುಮಾರ್ ಸೋಮವಾರ ಭೇಟಿ ನೀಡಿ ಅಭಿಮಾನಿಗಳನ್ನು ರಂಜಿಸಿದರು.
ಪತ್ನಿ ಗೀತಾ, ವೇದ ಚಿತ್ರದ ನಿರ್ದೇಶಕ ಹರ್ಷ ಹಾಗೂ ತಂಡದೊಡನೆ ಭೇಟಿ ನೀಡಿ ಪುಷ್ಪಪುಷ್ಪಾ ಎಂಬ ಹಾಡು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಅಭಿಮಾನಿಗಳು ಅಪ್ಪು ಅಪ್ಪು ಎಂದು ಕೂಗಿದ ಸಂದರ್ಭದಲ್ಲಿ ಅಪ್ಪು ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದರು. ಅಪ್ಪು ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.