ಗುಂಡ್ಲು ಪರಿಸರ ಸಮಿತಿ ರಚನೆ

28-GPT-3
Published on

ಗುಂಡ್ಲುಪೇಟೆ: ಪಟ್ಟಣದ ಚಿಕ್ಕಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಗುಂಡ್ಲು ಪರಿಸರ ಬಳಗವು ಗುಂಡ್ಲು ಪರಿಸರ ಸಮಿತಿ ರಚಿಸಿತು.


ಪಟ್ಟಣದ ಕಲ್ಯಾಣಿ ಕೊಳದ ಬಳಿ ನಡೆದ ಸಭೆಯಲ್ಲಿ ಗುಂಡ್ಲು ಪರಿಸರ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಎನ್.ಮಹದೇವಸ್ವಾಮಿ, ಅಧ್ಯಕ್ಷರಾಗಿ ಮಡಹಳ್ಳಿ ಮಹೇಶ್, ಉಪಾಧ್ಯಕ್ಷರಾಗಿ ಜಿ.ಜಿ.ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ಎಸ್.ಎಂ.ನಾಗಾರ್ಜುನ್ ಕುಮಾರ್, ಉಪಕಾರ್ಯದರ್ಶಿಯಾಗಿ ಶ್ರೀಕಂಠ, ಖಜಾಂಚಿಯಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ವಿ.ನಾ.ಚಿದಾನಂದ, ಸದಸ್ಯರಾಗಿ ಶಂಕರ್ ನಾರಾಯಣ ಜೋಯಿಸ್, ಸಂಪತ್ ಕುಂದಕೆರೆ, ಕೆ.ಪಿ.ಸಚಿನ್, ಕೇಬಲ್ ಕುಮಾರ್, ಪ್ರಕಾಶ್ ಜೈನ್, ಸೌಮ್ಯಾ ಹೆಗ್ಗಡಹಳ್ಳಿ, ರಘುರಾಮ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net