ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಿ

Untitled design (1)
ಮಾನ್ವಿಯ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಉಪ ತಹಸೀಲ್ದಾರ್ ವಿರುಪಣ್ಣಗೆ ಶನಿವಾರ ಮನವಿ ಸಲ್ಲಿಸಿತು. ಪ್ರಮುಖರಾದ ಮಲ್ಲನಗೌಡ, ತಿಮ್ಮರೆಡ್ಡಿ ಭೋಗವತಿ, ಹೆಚ್.ಮೌನೇಶ, ಗುರುಸಿದ್ದಪ್ಪ ಕಣ್ಣೂರು, ಶರಣಯ್ಯಸ್ವಾಮಿ, ವೀರನಗೌಡ ಇದ್ದರು.
Published on

ಮಾನ್ವಿ: ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ವೈದ್ಯ ಡಾ.ಜಯಪ್ರಕಾಶ ಪಾಟೀಲ್ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕಗಳಿಂದ ಶನಿವಾರ ಉಪ ತಹಸೀಲ್ದಾರ್ ವಿರುಪಣ್ಣಗೆ ಶನಿವಾರ ಮನವಿ ಸಲ್ಲಿಸಲಾಯಿತು.


ವೈದ್ಯನ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕ.ು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣ ಚಂದಾ, ತಾಲೂಕು ಪ್ರ.ಕಾರ್ಯದರ್ಶಿ ಹರಿಹರಪಾಟೀಲ್, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ. ಟಿ. ಶರಣಪ್ಪ ಬಲ್ಲಟಗಿ, ಉಪಾಧ್ಯಕ್ಷೆ ಡಾ.ಪ್ರಜ್ಞ ಹರಿಪ್ರಸಾದ್, ವೈದ್ಯರಾದ ಡಾ.ಬಸವಪ್ರಭು ಪಾಟೀಲ್, ಡಾ.ಚಂದ್ರಶೇಖರ, ಡಾ.ಎಸ್.ಡಿ.ಪಟ್ಟಿ, ಡಾ.ರೋಹಿನಿ ಮಾನ್ವಿಕರ್, ಡಾ.ಶರಣಪ್ಪ, ಡಾ.ಉದಯಭಾಸ್ಕರ್, ಡಾ.ಹರಿಪ್ರಸಾದ್ ಡಾ.ಚಂದ್ರಶೇಖರಯ್ಯಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net