ಗುಂಡಿ ಮುಚ್ಚಲು ಮುಂದಾದ ಪಿಡಬ್ಲ್ಯುಡಿ

8-UPBR-2
Published on

ಉಪ್ಪಿನಬೆಟಗೇರಿ: ಹಾರೋಬೆಳವಡಿ ಹೊರವಲಯದಿಂದ ಉಪ್ಪಿನಬೆಟಗೇರಿಗೆ ತೆರಳುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಈ ಕುರಿತು ವಿಜಯವಾಣಿಯಲ್ಲಿ ಸೆ. 4ರಂದು ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಲೋಕೋಪಯೋಗಿ ಇಲಾಖೆಯವರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಮಂಗಳವಾರ ರಸ್ತೆಯಲ್ಲಿ ಮಣ್ಣು ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net