ಗುಂಡಾ ಸಂಸ್ಕೃತಿ ಧಿಕ್ಕರಿಸಿ ಬಿಜೆಪಿಗೆ ಮತ ನೀಡಿ

1605Klb11
Published on

ಕಲಬುರಗಿ: ಜಿಲ್ಲೆಯ ಸಂಸ್ಕೃತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಳು ಮಾಡಿದ್ದು, ವ್ಯಾಪಾರಿ ಮರ್ಮಾಂಗಕ್ಕೆ ಟಾರ್ಚರ್ ಕೊಡುತ್ತಾರೆ. ಸಾಲು ಸಾಲು ಅಪರಾಧಗಳು ನಡೆಯುತ್ತಿವೆ. ಇಂತಹ ಗುಂಡಾ ಸಂಸ್ಕೃತಿಗೆ ತಿಲಾಂಜಲಿ ಹಾಡಲು ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ಮನವಿ ಮಾಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ನಾಮಪತ್ರ ಸಲ್ಲಿಕೆ, ಪ್ರಮುಖರ ಸಭೆಯಲ್ಲಿ ಮಾತನಾಡಿ, ಪ್ರೌಢ ಶಾಲೆ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಫೇಲ್ ಆದವರಿಗೆ ಪಾಠ ಮಾಡುವ ಕೆಲಸ ಹಚ್ಚಿ, ರಜೆ ಇಲ್ಲದಂತೆ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದರು.
ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲï ಮಾತನಾಡಿ, ಸಾಮಾಜಿಕ ಕಾರ್ಯಕರ್ತನಾಗಿ ಈ ಭಾಗದ ಏಳಿಗೆಗೆ ಶ್ರಮಿಸಿz್ದೆÃನೆ. ಹಿಂದೆ ಗೆಲುವು ಸಾಧಿಸಿದ್ದ ವೇಳೆ ಕ್ಷೇತ್ರದ ಅಭಿವೃದ್ಧಿಗೆ ಸದನ ಹೊರಗೆ, ಒಳಗೆ, ಶಿP್ಷÀಣದ ಪ್ರಗತಿ, ಖಾಲಿ ಹುz್ದÉ ಭರ್ತಿಗೆ ಹೋರಾಡಿz್ದÉÃನೆ. ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ ಅಲ್ಪ ಕಾರ್ಯಕ್ಕೆ ಪ್ರೋತ್ಸಾಹ ದೊರೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಮಾತನಾಡಿ, ಬಿಜೆಪಿಗೆ ಮೊದಲ ಪ್ರಾಶಸ್ತçÈದ ಮತ ಕೊಡಿಸಬೇಕು ಎಂದರು.
ನಗರಾಧ್ಯಕ್ಷ ಚಂದು ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಕುಷ್ಪಗಿ ಶಾಸಕ ದೊಡ್ಡಣ್ಣಗೌಡ ಪಾಟೀಲ್, ಬಳ್ಳಾರಿಯ ಮಹೇಶ್ವರ ಸ್ವಾಮಿ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಯಾದಗಿರಿ ಬಿಜೆಪಿ ಜಿ¯್ಲÁಧ್ಯP್ಷÀ ಅಮೀನ ರೆಡ್ಡಿ ಯಾಳಗಿ ಮಾತನಾಡಿದರು. ಶಾಸಕರಾದ ಡಾ.ಅವಿನಾಶ ಜಾಧವ್, ಪ್ರಮುಖರಾದ ಈಶ್ವರ ಸಿಂಗ್ ಠಾಕೂರ್, ಅವ್ವಣ್ಣ ಮ್ಯಾಕೇರಿ, ವಿಶಾಲ ದರ್ಗಿ, ಶಿವಾನಂದ ಪಿಸ್ತಿ, ಶೋಭಾ ಬಾಣಿ, ದಿಲೀಪ ಪಾಟೀಲï, ವಿದ್ಯಾದರ ಮಂಗಳೂರೆ ಇತರರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಬೆಳಮಗಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net