

ತಾಳಿಕೋಟೆ: ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಹೆಸರಿನಿಂದ ಕರೆಯುವ ಸುಕ್ಷೇತ್ರದಲ್ಲಿ ಶ್ರಾವಣ ಮಾಸದ 48 ದಿನಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ತಾಳಿಕೋಟೆ ತಾಲೂಕಿನ ಸುಕ್ಷೇತ್ರ ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಮೌನಾನುಷ್ಠಾನ ಆರಂಭಿಸಿದ್ದಾರೆ.
ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ 21ರವರೆಗೆ ಒಂದು ತಿಂಗಳ ಪರ್ಯಂತರ ಈ ಅನುಷ್ಠಾನ ಕೈಗೊಳ್ಳಲಿದ್ದಾರೆ.