ಗೀತೋಪದೇಶ ಸಾರ್ವಕಾಲಿಕ ಪ್ರಸ್ತುತ

1108Klb01
Published on

ಕಲಬುರಗಿ: ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಸಂದೇಶ ಸರ್ವರಿಗೂ ಮತ್ತು ಸಾರ್ವಕಾಲಿಕ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕ್ರಣ್ಣ ವಣಿಕ್ಯಾಳ ಅಭಿಮತ ವ್ಯಕ್ತಪಡಿಸಿದರು.
ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಅವತಾರ ಪುರುಷ ಹಾಗೂ ಗೀತಾ ಬೋಧಕ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಹಿಂದು ಧರ್ಮಗ್ರಂಥ ಭಗವದ್ಗೀತೆ ಸೇರಿ ಪ್ರಪಂಚದಲ್ಲಿರುವ ಎಲ್ಲ ಧರ್ಮಗಳ ತತ್ವ ಮತ್ತು ಸಾರದಿಂದ ಮಾನವ ಕಲ್ಯಾಣ ಸಾಧ್ಯ. ಶ್ರೀಕೃಷ್ಣ ಅದ್ಭುತ ವ್ಯಕ್ತಿತ್ವ, ಮೇಧಾವಿ, ರಾಜ ನೀತಿಜ್ಞನಾಗಿದ್ದು, ಕೃಷ್ಣನ ಸಂದೇಶ ಕೇವಲ ಯಾದವ ಸಮಾಜಕ್ಕೆ ಸಿಮೀತವಲ್ಲ ಎಲ್ಲ ಸಮಾಜಕ್ಕೂ ಅನ್ವಯಿಸುತ್ತದೆ. ಮಾನವರು ಬದುಕುವ ನೀತಿ ಗೀತೆ ಮೂಲಕ ತಿಳಿಸಿಕೊಟ್ಟಿದ್ದಾನೆ ಎಂದರು.
ಜಿಲ್ಲಾ ಯಾದವ ಸಂಘದ ಅಧ್ಯಕ್ಷ ರವೀಂದ್ರ ಉದನೂರ, ಲಕ್ಷ್ಮೀಕಾಂತ ಯಾದವ್, ಪ್ರವೀಣಕುಮಾರ ಪುಣೆ, ಮಹಾಂತೇಶ ಯಾದವ್, ಅನೀಲಕುಮಾರ ಯಾದವ್, ಕಲ್ಲಪ್ಪ ಯಾದವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net