ಗೀತೋಪದೇಶ ಸಾರ್ವಕಾಲಿಕ

bhr krishna
ಬಾಳೆಹೊನ್ನೂರಿನ ಶ್ರೀವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು.
Published on

ಬಾಳೆಹೊನ್ನೂರು: ಶ್ರೀಕೃಷ್ಣ್ಣನು ಬೋಧಿಸಿದ ಗೀತೋಪದೇಶದ ಸಂದೇಶ ಸಾರ್ವಕಾಲಿಕವಾಗಿದ್ದು, ಈ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಉಜ್ಜಿನಿ ಆದಿಶಕ್ತಿ ಬನ್ನಿಮಹಾಂಕಾಳಿ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲ ಗೌಡ ಹೇಳಿದರು.

ಪಟ್ಟಣದ ಶ್ರೀವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಸಂಘಸಂಸ್ಥೆಗಳು ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿ ಮನೆಯಲ್ಲಿ ಮಗುವಿಗೆ ಗುರುವಾದರೆ, ಶ್ರೀಕೃಷ್ಣ್ಣ ಜಗದ್ಗುರುವಾಗಿದ್ದಾನೆ. ಮಕ್ಕಳಿಗೆ ದೇವರ ವೇಷವನ್ನು ತೊಡಿಸಿ ಅಧ್ಯಾತ್ಮ ಚಿಂತನೆಗೆ ಒಳಪಡಿಸಬಹುದಾಗಿದೆ ಎಂದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಹನಾ ಯೋಗೀಶ್ ಮಾತನಾಡಿ, ಮಕ್ಕಳು ದೇವರ ವೇಷ ತೊಟ್ಟಾಗ ಅವರಲ್ಲಿ ದೈವತ್ವ ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ವಿಕ್ರಂ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು. ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿಯೇ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಅಗಸ್ತ್ಯ(ಪ್ರಥಮ), ಸಾರಿಯಾ(ದ್ವಿತೀಯ), ಪ್ರತೀಕ್ಷಾ(ತೃತೀಯ) ಬಹುಮಾನ ಪಡೆದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ, ಐಟಿಐ ಪ್ರಾಚಾರ್ಯ ಎಚ್.ಆರ್.ಆನಂದ್, ಬಂಟರ ಸಂಘದ ಅಧ್ಯಕ್ಷ ರಾ.ವೆಂಕಟೇಶ್, ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮೇಗೌಡ, ಲಯನ್ಸ್ ಕಾರ್ಯದರ್ಶಿ ಸುಧಾಕರ್, ಇನ್ನರ್‌ವ್ಹೀಲ್ ಕಾರ್ಯದರ್ಶಿ ಸುಪ್ರಿಯಾ, ಪ್ರಮುಖರಾದ ಬಿ.ವೈ.ಶಿಶಿರ, ಶ್ರೀಕೃಷ್ಣ ಭಟ್, ಎಂ.ಕೆ.ಪುಟ್ಟರಾಜು, ವೈಶಾಲಿ ಕುಡ್ವ, ನಯನಾ ಪ್ರಸಾದ್, ಮಂಜುನಾಥ್, ಎ.ಆರ್.ವೆಂಕಟೇಶ್, ಭಗವಾನ್, ಕವಿತಾ ಕೇಶವ್, ಶ್ರೀಕೃಪಾ, ಶ್ರೀಕೃತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net