ಗೀತೆಯ ಸಂದೇಶ ಇಂದಿಗೂ ಅನ್ವಯ

11ss2
Published on

ಶನಿವಾರಸಂತೆ: ಜನ್ಮಾಷ್ಟಮಿ ಪ್ರಯುಕ್ತ ಶನಿವಾರಸಂತೆ ಟೀಮ್ ಡ್ರೀಮ್ ಪ್ಲೇಯಿಂಗ್ ಸ್ಟಾರ್ಸ್ ನೃತ್ಯ ತರಬೇತಿ ಶಾಲೆಯಲ್ಲಿ ಸೋಮವಾರ ರಾಧಾ- ಕೃಷ್ಣ ಛದ್ಮವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಮುಳ್ಳುರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಸ್ಪರ್ಧೆ ಉದ್ಘಾಟಿಸಿ
ಮಾತನಾಡಿ, ಭಗವದ್ಗೀತೆಯಲ್ಲಿ ಕೃಷ್ಣನ ಒಂದೊಂದು ಸಂದೇಶವೂ ವರ್ತಮಾನಕ್ಕೆ ಅನ್ವಯವಾಗಿದೆ. ಅದನ್ನು ಅನುಸರಿಸಿದರೆ ಜೀವನ ಸುಗಮ ಎಂದರು.
ವಿದ್ಯಾರ್ಥಿಗಳು ಭಗವದ್ಗೀತೆ ಶ್ಲೋಕ ಪಠಿಸುವ ಪದ್ಧತಿ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನೃತ್ಯ ತರಬೇತಿ ನಮ್ಮ ಸಂಸ್ಕೃತಿಯ ಒಂದು ಭಾಗ. ನೃತ್ಯವನ್ನು ಚನ್ನಾಗಿ ಅಭ್ಯಾಸ ಮಾಡಬೇಕು ಎಂದು ಅವರು ಹೇಳಿದರು.
ವಿವಿಧ ಶಾಲೆಯ ವಿದ್ಯಾರ್ಥಿಗಳು ಕೃಷ್ಣ- ರಾಧೆಯರ ವೇಷಭೂಷಣ ತೊಟ್ಟು ಅಭಿನಯಗಳೊಂದಿಗೆ ಹಾಡಿದ್ದು ಗಮನ ಸೆಳೆಯಿತು. ನೃತ್ಯ ತರಬೇತುದಾಋ ಶರಣ್‌ಕುಮಾರ್, ಸೆಕ್ರೆಡ್ ಹಾರ್ಟ್ ಶಾಲೆ ಶಿಕ್ಷಕರಾದ ಸಂಧ್ಯಾ, ಆಶಾ, ಉದ್ಯಮಿ ಲಿಂಗರಾಜು ಇತರರು ಹಾಜರಿದ್ದರು.
ವಿಜೇತರು: 6 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಏಕಾನ್ (ಪ್ರ) ವರ್ಣಿಕಾ (ದ್ವಿ) ಮತ್ತು ಎಂ.ಎಸ್.ಬೃಂದಾ ತೃತೀಯ ಸ್ಥಾನ ಪಡೆದುಕೊಂಡರು. 7 ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಎಚ್.ಕೆ. ಹನಿ (ಪ್ರ), ಬಿ.ಎಸ್.ಯುಗನ್ (ದ್ವಿ) ಮತ್ತು ಎನ್.ಆರ್.ಹನಿ ತೃತೀಯ ಸ್ಥಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net