ಗಿರಿಯಾಸ್ 2ನೇ ಮಳಿಗೆ ಉದ್ಘಾಟನೆ

h10-Giriyas 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಗಿರಿಯಾಸ್ 2ನೇ ಮಳಿಗೆಯನ್ನು ನಗರದ ಬ್ರಾಡ್​ವೇಯ ಟೌನ್ ಪೊಲೀಸ್ ಠಾಣೆ ಎದುರಿನ ಕಟ್ಟಡದಲ್ಲಿ ಶನಿವಾರ ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸಿದರು.

ನಂತರ ಮಳಿಗೆಯಲ್ಲಿನ ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವೀಕ್ಷಿಸಿದರು. ಪ್ರತಿಯೊಂದು ವಸ್ತುಗಳ ಮಾಹಿತಿ ಪಡೆದ ಶೆಟ್ಟರ್, ಅವುಗಳ ಬೆಲೆ, ಬರುವ ಬಾಳಿಕೆ ಹಾಗೂ ಗ್ರಾಹಕರ ಬೇಡಿಕೆಗಳ ಕುರಿತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದರು. ಇದಕ್ಕೂ ಮೊದಲು ಶೆಟ್ಟರ್ ಅವರಿಗೆ ಪೇಟ ತೊಡಿಸಿ ಸನ್ಮಾನಿಸಲಾಯಿತು.

ಗಿರಿಯಾಸ್ ಉತ್ತರ ಕರ್ನಾಟಕದ ಮುಖ್ಯಸ್ಥ ಮಹಾವೀರ ಜೈನ್ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಇದು 2ನೇ ಮಳಿಗೆ. ಉದ್ಘಾಟನೆ ಹಿನ್ನೆಲೆಯಲ್ಲಿ ಶೇ. 70ರಷ್ಟು ರಿಯಾಯಿತಿ ದರಗಳನ್ನು ಪ್ರಕಟಿಸಲಾಗಿದೆ. ಲ್ಯಾಪ್​ಟಾಪ್, ಮೊಬೈಲ್ ಫೋನ್, ಟಿವಿ, ಫ್ರಿಡ್ಜ್, ಮಿಕ್ಸರ್ ಗ್ರ್ಯಾಂಡರ್ ಸೇರಿ ವಿವಿಧ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.

ಗಿರಿಯಾಸ್​ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಗಿರಿಯಾ, ಪ್ರಧಾನ ವ್ಯವಸ್ಥಾಪಕರಾದ ಅಶೋಕ ತಿವಾರಿ, ವಿಜಯರಾಜ್, ದತ್ತಾತ್ರೇಯ ಕಂದಕೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net