ಗಿರಿಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಚಾಲನೆ

ydg04
Published on

ಯಾದಗಿರಿ: ನಗರದ ಎಲ್ಲಡೆ ಗಣೇಶ ಹಬ್ಬ ಸಡಗರ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಶನಿವಾರ ಆಚರಿಸಿದರು. ವಿಘ್ನ ನಿವಾರಕ ವಿನಾಯಕನನ್ನು ಇಲ್ಲಿನ ಸಾವಿರಾರು ಮನೆಗಳಲ್ಲಿ ಕೂಡಿಸುವ ಮೂಲಕ ವಿಶೇಷ ಪೂಜೆ, ಅಲಂಕಾರ, ದೀಪೋತ್ಸವ, ವಿವಿಧ ಸಿಹಿ ಪದಾರ್ಥಗಳ ನೈವೇದ್ಯ ಅರ್ಪಿಸಿ ಭಜಿಸಿದರು.

ಮಣ್ಣಿನ, ಕಲರ್‌ಫೂಲ್ ಗಣೇಶನ ಸಣ್ಣ-ಸಣ್ಣ ಮೂರ್ತಿಗಳನ್ನು ಖರೀದಿಸಿ ತಂದ ಅನೇಕರು ಒಂದು ದಿನ ಪ್ರತಿಪ್ಠಾಪಿಸಿ ಕೆರೆಗೆ ಬಿಟ್ಟರೆ, ಇನ್ನೂ ಕೆಲವರು ೫, ೯ದಿನಗಳವರೆಗೆ ನಿತ್ಯ ವಿವಿಧ ತರಹದ ಪೂಜೆ, ಸಿಹಿ ತಿನುಸುಗಳ ನೈವೇದ್ಯ ಅರ್ಪಿಸಿ, ಸಂಜೆ ಹೊತ್ತು ಭಜನೆ ಮಾಡುವ ಮೂಲಕ ನಿತ್ಯವೂ ಆರಾಧಿಸುತ್ತಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೇ ದೂರದಿಂದ ಮೆರವಣಿಗೆ ಮೂಲಕ ಮಂಟಪಕ್ಕೆ ತಂದು ಕೂಡಿಸಿದ್ದಾರೆ. ನಗರದ ಎಲ್ಲಡೆ ಸಂಜೆಯಾದರೇ ಸಾಕು ದೀಪಾಂಲಕರ ಹೊಳಪು, ವಿಶೇಷ ಪೂಜೆ, ಮಹಾ ಪಂಚಾಮೃತ ಅಭಿಷೇಕ, ಅಷ್ಠ ದ್ರವ್ಯ ಗಣಪತಿ ಹೋಮ, ಹೋಮ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿ, ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗಣೇಶ ಉತ್ಸವಕ್ಕೆ ಮೆರಗು ನೀಡುತ್ತಿದ್ದಾರೆ.

ಗಜಾನನ, ಗಣಪತಿ, ವಿನಾಯಕ, ವಿಘ್ನೇಶ್ವರ, ವಿದ್ಯಾಪ್ರದಾಯಕ, ವೀರ ಗಣಪತಿ, ಶಕ್ತಿ ಗಣಪತಿ ಹೀಗೆ ಒಟ್ಟು ೩೨ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಕಲಾವಿದ ಕುಂಚದಲ್ಲಿ ವಿವಿಧ ಭಂಗಿಗಳಲ್ಲಿ ಅರಳಿದ ವಿನಾಯಕ ನೋಡುಗರ ಮನಸೂರೆಗೊಂಡಿದ್ದಾನೆ.

ಇಲ್ಲಿನ ಜೈ ಭವಾನಿ ಮಂದಿರದಲ್ಲಿ ಹಿಂದು ಮಹಾ ಗಣಪತಿ ಉತ್ಸವ ಸಮಿತಿಯವರು ವಿಶೇಷ ಅಲಂಕಾಲದ ವೇದಿಕೆ ನಿರ್ಮಿಸಿ ಭವ್ಯ ಮೆರವಣಿಗೆ ನಡೆಸುವ ಮೂಲಕ ಅದ್ದೂರಿ ಗಣೇಶನ ಹಬ್ಬಕ್ಕೆ ಚಾಲನೆ ನೀಡಿದ್ದಾರೆ.

ನಗರದ ವಿವಿಧಡೆ ಪ್ರತಿಪ್ಠಾಪಿಸಿರುವ ಗಣೇಶ ಮಂಟಪದ ಬಳಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೋಂಗಾರ್ಡ್, ಪೊಲೀಸ್ ಪೇದೆ ಮತ್ತು ಮಂಡಳಿ ಸ್ವಯಂ ಸೇವಕರು ಹಗಲು ರಾತ್ರಿ ಎನ್ನದೆ ರಕ್ಷಣೆಯಲ್ಲಿದ್ದು, ರಾತ್ರಿ ಪ್ರತಿ ಗಣೇಶ ವಿಗ್ರಹದ ಬಳಿ ವಿವಿಧ ಮನೋರಂಜನೆ ಕರ‍್ಯಕ್ರಮಗಳು ಆಯೋಜಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net