

ದಾವಣಗೆರೆ: ಎಸ್‌ಕೆಪಿ ರಸ್ತೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಸಂಘದಿಂದ ಡಿ.9, 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಆರ್.ಎಲ್. ಪ್ರಭಾಕರ ತಿಳಿಸಿದರು. ಡಿ.9ರಂದು ಬೆಳಗ್ಗೆ ದೇವಸ್ಥಾನ ಆವರಣದಲ್ಲಿ ಗಂಗಾಪೂಜೆ, ಭಸ್ಮಾಭಿಷೇಕ, ಪ್ರಾರ್ಥನೆ, ಏಕಾದತ ರುದ್ರಾಭಿಷೇಕ, ರುದ್ರ ಪಾರಾಯಣ, ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಆಯುಷ್ಯ ಹೋಮ, ಧನ್ವಂತರಿ ಸಹಿತ ರುದ್ರ ಹೋಮ, ವಾಸವಿ ಹೋಮ ನೆರವೇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.