ಗಿರಿಜನರಿಗೆ ಸೂರು ಒದಗಿಸಲು ಕ್ರಮ

Published on

ಹನೂರು: ತಾಲೂಕಿನ ಸೋಲಿಗರ ಪೋಡುಗಳಲ್ಲಿ ಗಿರಿಜನರಿಗೆ ಮನೆ ನೀಡುವ ವಿಚಾರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಗತ್ಯ ಕ್ರಮವಹಿಸಿದೆ.

ನ.21ರ ವಿಜಯವಾಣಿ ‘ಅತಂತ್ರ ಸ್ಥಿತಿಯಲ್ಲಿ ಗಿರಿಜನರ ಬದುಕು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಸಂಬಂಧ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ವಿಜಯವಾಣಿಯೊಂದಿಗೆ ಮಾತನಾಡಿ, ವಿವಿಧ ಯೋಜನೆಯಡಿ ಗ್ರಾಪಂಗೆ ಮಂಜೂರಾಗುವ ಮನೆಗಳಲ್ಲಿ ಎಸ್ಟಿಗೆ ಮೀಸಲಿರುವ ಮನೆಗಳನ್ನು ಗಿರಿಜನರು ಪಡೆಯಬಹುದು. ಆದರೆ ಇಲಾಖೆಯಿಂದ ಗಿರಿಜನರಿಗೆ ಮನೆ ನೀಡಲು ಯಾವುದೇ ಪ್ರತ್ಯೇಕ ಅವಕಾಶ ಇಲ್ಲ. ಗಿರಿಜನರಿಗೆ ಮನೆ ನೀಡುವ ಸಂಬಂಧ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲೆಗೆ 2,933 ಮನೆಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದರೆ ಮನೆಗಳನ್ನು ನೀಡಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net