ಗಿರಿಜನರ ಗ್ರಾಮಗಳಲ್ಲಿ ಆಧಾರ್ ನೋಂದಣಿ

14 HANUR 2
Published on

ಹನೂರು: ಗಿರಿಜನರ ಗ್ರಾಮಗಳಲ್ಲಿ ಆಧಾರ್ ನೋಂದಣಿ ಅಭಿಯಾನವನ್ನು ಆರಂಭಿಸಲಾಗಿದ್ದು, ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಮನವಿ ಮಾಡಿದ್ದಾರೆ.


ಈ ಸಂಬಂಧ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಬಹುಮುಖ್ಯ. ಆದರೆ ಕೆಲವರು ಆಧಾರ್ ನೋಂದಣಿ ಮಾಡಿಸಿಲ್ಲ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ತೊಡಕಾಗಿ ಪರಿಣಮಿಸಿದೆ. ಈ ದಿಸೆಯಲ್ಲಿ ಇಲಾಖೆಯ ವತಿಯಿಂದ ಆಧಾರ್ ನೋಂದಣಿ ಅಭಿಯಾನವನ್ನು ಆರಂಭಿಸಲಾಗಿದ್ದು, ಈಗಾಗಲೇ ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ ಅಂಗವಿಕಲರು ಸೇರಿದಂತೆ 154 ಜನರಿಗೆ ಆಧಾರ್ ಕಾರ್ಡ್ ವಿತರಿಸಲಾಗಿದೆ. ಇನ್ನು 724 ಜನರ ಆಧಾರ್ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net