ಗಿರಿ ಜಿಲ್ಲೆಯಲ್ಲಿಲ್ಲ ಮೈತ್ರಿ ಧರ್ಮ ಪಾಲನೆ !

Published on

ಯಾದಗಿರಿ: ಇನ್ನೊಂದು ವಾರದಲ್ಲಿ ನಡೆಯುವ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಕೂಗು ಕೇಳಲಾರಂಭಿಸಿದೆ.

ಈಗಷ್ಟೆ ಮುಗಿದಿರುವ ರಾಜ್ಯದ ೨೮ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಕೂಡಿಕೊಂಡೇ ಎದುರಿಸಿವೆ. ಆದರೆ ಪದವೀಧರ ಕ್ಷೇತ್ರದ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಸಹಿತ ಯಾದಗಿರಿ ಜಿಲ್ಲಾಧ್ಯಕ್ಷರಾದಿಯಾಗಿ ಯಾರೊಬ್ಬರೂ ಇದುವರೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಸಂಪರ್ಕಸಿಲ್ಲ. ಜಿಲ್ಲೆಯಲ್ಲಿ ಏಕಮೇವ ಜೆಡಿಎಸ್ ಶಾಸಕರಿದ್ದರೂ ಅವರನ್ನು ಪ್ರಚಾರದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ.

ಈ ಚುನಾವಣೆಯಲ್ಲಿ ಪದವೀಧರರೇ ಮತದಾರರಾಗಿದ್ದು, ಅವರನ್ನು ಭೇಟಿ ಮಾಡಿ ಮತ ಕೇಳಲು ಮೈತ್ರಿ ಪಕ್ಷಗಳ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಬೇಕೇಬೇಕು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಇನ್ನೇನು ಮತದಾನಕ್ಕೆ ಐದಾರು ದಿನ ಬಾಕಿ ಇದ್ದು, ಕೊನೇ ಘಳಿಗೆಯ ಕಸರತ್ತಿಗಾದರೂ ಜೆಡಿಎಸ್ ಪಕ್ಷದವರನ್ನು ಜತೆಗೆ ಕರೆದುಕೊಂಡು ಪ್ರಚಾರ ಮಾಡಿ ಮತಯಾಚಿಸಿದರೆ ತೆರೆಮರೆಯಲ್ಲಿರುವ ಅಸಮಾಧಾನವಾದರೂ ತಕ್ಕ ಮಟ್ಟಿಗೆ ಕಡಿಮೆಯಾಗಬಹುದು.

ಈಶಾನ್ಯ ಪದವೀಧರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರಿದ್ದಾರೆ. ಒಬ್ಬರು ಗುರುಮಠಕಲ್‌ನ ಶರಣಗೌಡ ಕಂದಕೂರ, ಇನ್ನೊಬ್ಬರು ದೇವದುರ್ಗದ ಕರೆಯಮ್ಮ. ಈ ಚುನಾವಣೆ ಪ್ರಚಾರಕ್ಕೆ ಕಡಿಮೆ ಸಮಯ ಸಿಕ್ಕಿದ್ದು, ಎರಡೂ ಪಕ್ಷ ಸೇರಿದರೆ ಇನ್ನಷ್ಟು ವೇಗದಲ್ಲಿ ಮತದಾರರನ್ನು ಸೆಳೆಯಬಹುದಾಗಿತ್ತು. ಕೇವಲ ೮ ದಿನ ಬಾಕಿ ಇದ್ದರೂ ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿ ರಾಜ್ಯ ನಾಯಕರಾಗಲಿ, ಸ್ಥಳೀಯ ನಾಯಕರಾಗಲಿ ಜೆಡಿಎಸ್ ಜಿಲ್ಲಾ ಘಟಕವನ್ನು ಕ್ಯಾರೆ ಎಂದಿಲ್ಲ ಎಂಬ ಆರೋಪ ಬಲವಾಗಿದೆ.

ಜಿಲ್ಲೆಯಲ್ಲಿ ೧೫ ಸಾವಿರ ಮತದಾರರಿದ್ದಾರೆ. ಈ ಪೈಕಿ ಗುರುಮಠಕಲ್ ಕ್ಷೇತ್ರದಲ್ಲಿ ೩೦೦೦, ಯಾದಗಿರಿಯಲ್ಲಿ ೫೦೦೦, ಶಹಾಪುರದಲ್ಲಿ ೪೦೦೦ ಮತ್ತು ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ೩೦೦೦ ಮತದಾರರು ಇದ್ದಾರೆ. ಹಿಂದೆ ರಾಜ್ಯವಾಳಿದ ಜೆಡಿಎಸ್‌ಗೆ ಬಹುತೇಕ ಮತದಾರರ ಸಂಪರ್ಕ ಇz್ದೆÃ ಇರುತ್ತದೆ. ಆದರೂ ಈ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಗೆ ಯಾಕೆ ಇಷ್ಟು ನಿರ್ಲಕ್ಷÈ ಎಂಬುದೇ ತಿಳಿಯದಾಗಿದೆ.

ತೆನೆ ಹೊತ್ತ ಮಹಿಳೆ ಪಕ್ಷ ಸಂಪರ್ಕಿಸದ ಕೇಸರಿಪಡೆ: ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಯಾದಗಿರಿಗೆ ಒಮ್ಮೆ ಬಂದು ಹೋಗಿದ್ದಾರೆ. ಅಲ್ಲದೆ ಶನಿವಾರ ಎಂಎಲ್‌ಸಿ ಶಶೀಲ್ ನಮೋಶಿ, ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಇತರ ನಾಯಕರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಚುನಾವಣೆ ಸಭೆ ಮಾಡಿದ್ದಾರೆ. ಇವರಾದರೂ ಜೆಡಿಎಸ್ ಜಿಲ್ಲಾ ಘಟಕ ಸಂಪರ್ಕಿಸಿ ಮೈತ್ರಿ ಪ್ರಕಾರ ಕೂಡಿ ಕೆಲಸ ಮಾಡೋಣ ಎಂದು ಹೇಳಬಹುದಿತ್ತು ಎಂಬುದು ಆ ಪಕ್ಷದ ಹಿರಿಯ ಮುಖಂಡರ ಅಭಿಪ್ರಾಯ. ಇನ್ನು ಶಹಾಪುರದಲ್ಲಿರುವ ಬಿಜೆಪಿ ಜಿಲ್ಲಾಧ್ಯಕ್ಷರಾದರೂ ಇವರನ್ನು ಭೇಟಿ ಮಾಡಿ ಪ್ರಚಾರ ಕೆಲಸಕ್ಕೆ ಬನ್ನಿ ಎಂದು ಹೇಳಬಹುದಿತ್ತು. ಆದರೆ ಇದ್ಯಾವುದೂ ಆಗಿಲ್ಲ. ಹೀಗಾಗಿ ಎಲ್ಲದರಲ್ಲೂ ನಿರ್ಲಕ್ಷÈಕ್ಕೆ ಒಳಗಾಗಿರುವ ಯಾದಗಿರಿ ಜಿಲ್ಲೆ ಈ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಲ್ಲೂ ಮಿತ್ರ ಪಕ್ಷ ನಿರ್ಲಕ್ಷÈ ಮಾಡಿದೆ ಎಂಬ ಕೂಗು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net