ಯಾದಗಿರಿ: ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ರುದ್ರತಾಂಡವ ಆಡುತ್ತಿದ್ದು, ಪ್ರಗತಿ ಮರೀಚಿಕೆಯಾಗಿದೆ. ರಾಜ್ಯದೆಲ್ಲೆಡೆ ಸದ್ದು ಮಾಡಿದ ಹಲವು ಘಟನೆ, ರಾಜಕೀಯ ಬೆಳವಣಿಗೆ ಕಂಡರೂ ಗಿರಿ ಜಿಲ್ಲೆಯಲ್ಲಿ ವಿಪಕ್ಷ ಬಿಜೆಪಿ ಜನರ ಧ್ವನಿಯಾಗದೆ ಮೌನಕ್ಕೆ ಜಾರಿದೆ. ಚುನಾವಣೆಯಲ್ಲಿ ಆದ ಹಿನ್ನಡೆಯಿಂದಾಗಿ ಕೇಸರಿಪಡೆ ಸಂಪೂರ್ಣ ಥಂಡಾ ಹೊಡೆದಿರುವಂತಿದೆ.
ಇನ್ನೊAದೆಡೆ ವರ್ಗಾವಣೆಗಾಗಿ ತೈಲಿ ಬದಲಾವಣೆ ಕಾರಣಕ್ಕೆ ಪಿಎಸ್‌ಐ ಪರಶುರಾಮ ಸಾವು ಸಂಭವಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತು. ಘಟನೆ ನಡೆದ 15 ದಿನಗಳ ಬಳಿಕ ಕೇಸರಿಪಡೆ ಈಗ ನಿದ್ರೆಯಿಂದ ಮೈಕೊಡವಿಕೊಂಡು ಎದ್ದಿರುವಂತಿದೆ. ಅದು ಬೆಂಗಳೂರಿನ ನಾಯಕರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಪಿಎಸ್‌ಐ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮತ್ತವರ ಪುತ್ರನ ಬಂಧಿಸಬೇಕು,ಸಿಬಿಐಗೆ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಆ.13ರಂದು ಬಿಜೆಪಿ ರಾಜ್ಯ ನಾಯಕರು ನಗರದಲ್ಲಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದಾರೆ. ಘಟನೆ ಕಾಲಕ್ಕೆ ನಡೆದ ಹೋರಾಟದಿಂದ ಕೊಂಚ ಜಾಗೃತಗೊಂಡು ಬಿಜೆಪಿ ಕೆಲವರು ಹೇಳಿಕೆ ನೀಡಿ ಕೈತೊಳೆದುಕೊಂಡರೇ ಹೊರತು ಎಲ್ಲೂ ಧನಿ ಎತ್ತಲಿಲ್ಲ. ಈಗ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಮಾಜಿ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಾವೇನು ಸುಮ್ಮನ್ನೇ ಕುಳಿತಿಲ್ಲ ಎಂಬ ಸಂದೇಶ ಜನತೆಗೆ ಮತ್ತು ಪಕ್ಷದ ವರಿಷ್ಠರಿಗೂ ರವಾನಿಸಲು ಬಿಜೆಪಿ ಸಜ್ಜಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. 15 ದಿನಗಳ ವರೆಗೂ ಘಟಾನುಘಟಿ ನಾಯಕರು ಏಕೆ ಹೋರಾಟಕ್ಕಿಳಿಯಿಲ್ಲ?, ಬೆಂಗಳೂರಿನ ನಾಯಕರು ಬರುವವರೆಗೂ ಜಿಲ್ಲಾ ಘಟಕದವರು, ಜಿಲ್ಲೆಯ ನಾಯಕರು ಯಾಕೆ ಧ್ವನಿ ಎತ್ತಲಿಲ್ಲ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ.
ಪರಶುರಾಮ ಸಾವಿನ ಸುದ್ದಿ ಎಲ್ಲಡೆ ಸದ್ದು ಮಾಡಿ ಸಂಚಲನ ಮೂಡಿಸಿತು. ಆದರೆ, ಜಿಲ್ಲೆಯ ಬಿಜೆಪಿಗೆ 15ದಿನಗಳ ನಂತರ ಎಚ್ಚರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಳುವ ಪಕ್ಷಕ್ಕೆ ಕೇಳುವ ಪಕ್ಷವೇ ಪ್ರಮುಖ ಅಸ್ತç. ಆದರೆ, ಜಿಲ್ಲೆಯಲ್ಲಿ ನೂರೆಂಟು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಒದಗಿಸಬೇಕಾದ ಸರ್ಕಾರ ನಿರ್ಲಕ್ಷÈ ಮಾಡಿದಾಗ ಪ್ರಶ್ನಿಸಿ, ಹೋರಾಟಕ್ಕಿಳಿದು ಜನತೆ ಕೆಲಸ ಮಾಡಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಜನರ ನಿರೀಕ್ಷೆಯಂತೆ ಕೆಲಸ ಮಾಡದಿರುವುದುಜನಾಕ್ರೊಶಕ್ಕೆ ಕಾರಣವಾಗಿದೆ. ಈಗ ರಾಜ್ಯ ನಾಯಕರು ಬಂದಾಗ ಜಾಗೃತಗೊಂಡಿದ್ದಾರೆ. ಹೀಗೆ ಜನರ ಧ್ವನಿಯಾಗಿ ಪ್ರಬಲ ವಿಪಕ್ಷವಾಗಿ ಕೆಲಸ ಮಾಡಲಿ ಎನ್ನುವುದು ಜನಾಶಯ.
ಆಡಳಿತ ಯಂತ್ರ ಎಚ್ಚರಿಸಲಿಲ್ಲ ಹೋರಾಟ ಮಾಡಲಿಲ್ಲ: ಯಾದಗಿರಿ ಜಿಲ್ಲೆಯ ಪ್ರಮುಖ ಮತ್ತು ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸಂಜೆಯಾಗುತ್ತಲೇ ಅರ್ಧ ಜಿಲ್ಲೆ ಕತ್ತಲಲ್ಲಿರುತ್ತದೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ. ಹಳ್ಳಿಗಳಲ್ಲಿ ಚರಂಡಿಗಳು ಜನರಿಗೆ ಹೆಸಿಗೆ ಹುಟ್ಟಿಸಿವೆ. ಇನ್ನೂ ಕೆಲ ವಸತಿ ನಿಲಯಗಳು ಆರಂಭಗೊAಡಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತç, ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಡೆಂಘೆ ಹಾವಳಿ ಹೆಚ್ಚುತ್ತಲೇ ನಡೆದಿದೆ.ಹೀಗೆ ಸಾಲು ಸಾಲು ಸಮಸ್ಯೆಗಳಿವೆ.ಇವು ಕೇಸರಿಪಡೆಗೆ ಕಾಣುತ್ತಿಲ್ಲ. ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಮಳೆಗಾಲದಲ್ಲಿ ಬಸವ ಸಾಗರ ಜಲಾಶಯದಿಂದ ಬಿಟ್ಟ ನೀರಿನಿಂದಾಗಿ ಕೊಳ್ಳುರ ಸೇತುವೆ ಮುಳುಗಡೆಯಾಗಿ ಸುತ್ತಲಿನ ಪ್ರದೇಶದ ಮತ್ತು ನದಿಪಾತ್ರದಲ್ಲಿನ ಬೆಳೆಗಳು ಹಾನಿಯಾಗಿವೆ. ಸುರಪುರ,ಶಹಾಪುರ ತಾಲೂಕುಗಳಲ್ಲಿ ಹಲವು ಕಡೆ ರಸ್ತೆಗಳು ಕೊಚ್ಚಿ ಹೋಗಿವೆ. ನಾಟಿ ಮಾಡಿದ್ದ ಭತ್ತ ಕೊಚ್ಚಿಕೊಂಡು ಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ಧಾರೆ. ಅಧಿಕಾರಿ,ಜನಪ್ರತಿನಿಧಿಗಳು ಕಾಟಾಚಾರಕ್ಕೆ ಎಂಬAತೆ ಸ್ಥಳಕ್ಕೆ ಭೇಟಿ ನೀಡಿದರು. ಆದರೆ, ವಿಪಕ್ಷದವರು ಮಾತ್ರ ಗಟ್ಟಿ ಧ್ವನಿ ಎತ್ತಲಿಲ್ಲ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಿಲ್ಲ.
ಪ್ರಭಾರಿ ಅಧಿಕಾರಿಗಳೇ ಹೆಚ್ಚು: ಇಲ್ಲಿನ ವಿವಿಧ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಗಳೇ ಹೆಚ್ಚಾಗಿದ್ದಾರೆ. ಇದರಿಂದಾಗಿ ಆಡಳಿತ ಯಂತ್ರ ಜಿಡ್ಡುಗಟ್ಟಿದಂತಾಗಿದೆ. ಪೂರ್ಣ ಪ್ರಮಾಣದ ಅಧಿಕಾರಿಗಳಿಲ್ಲದೆ ಕೆಲಸ ನಡೆಯುತ್ತಿವೆ. ಯಾದಗಿರಿ ನಗರಸಭೆಗೆ 17 ತಿಂಗಳಿAದ ಆಯುಕ್ತರೇ ಇಲ್ಲ. ಇನ್ನೊಂದು ದುರಂತವೆAದರೆ ದೇವದುರ್ಗದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಸಸ್ಪೆಂಡ್ ಆಗಿದ್ದ 18ಪಿಡಿಒ,ಐವರು ಕಾರ್ಯದರ್ಶಿಗಳನ್ನು ಜಿಲ್ಲೆಯ ಉದ್ಧಾರಕ್ಕೆ ನಿಯುಕ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಮಟಕಾ, ಜೂಜಾಟ ಮತ್ತು ಅಕ್ರಮ ಮರಳುಗಾಗಿಕೆ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಬಿಜೆಪಿ ಮಾತ್ರ ಎಲ್ಲ ಗೊತ್ತಿದ್ದು, ಮೌನಕ್ಕೆ ಶರಣಾಗಿದ್ದು ಮಾತ್ರ ಸೊಜಿಗವಾಗಿದೆ. ರಸ್ತೆ ಸಂಚಾರ ನಿಯಮಗಳು ಗಾಳಿಗೆ ತೂರಲಾಗುತ್ತಿದೆ. ಆದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ.
ಕೆಡಿಪಿ ಸಭೆ ನಡೆದಿಲ್ಲ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸುವ ಜಿಲ್ಲಾ ಮಟ್ಟಡ ತ್ರೆÊಮಾಸಿಕ ಕೆಡಿಪಿ ಸಭೆ ಕಳೆದ 10 ತಿಂಗಳಿAದ ನಡೆದಿಲ್ಲ. ಗ್ಯಾರಂಟಿ ಯೋಜನೆಯ ಗೃಹಲಕ್ಷಿö್ಮ ಹಣ ಐದು ತಿಂಗಳಿAದ ಜಮಾವಾಗಿಲ್ಲ. ವಿದ್ಯುತ್ ನಿತ್ಯ ಕಣ್ಣುಮುಚ್ಚಾಲೇ ಆಡುತ್ತಲೇ ಇದೆ. ಇನ್ನೂ ಅರಣ್ಯ, ಅಬಕಾರಿ, ರೇಷ್ಮೆ, ತೋಟಗಾರಿಕೆ, ಪ್ರವಾಸೋದ್ಯಮ, ಭೂ ಮತ್ತು ಗಣಿ ಇಲಾಖೆ,ಮಿನುಗಾರಿಕೆ, ಧಾರ್ಮಿಕ ದತ್ತಿ , ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಏನು ಕೆಲಸ ಮಾಡುತ್ತಿವೆ ಎಂಬುವುದೇ ಜನಕ್ಕೆ ಗೊತ್ತಾಗುತ್ತಿಲ್ಲ. ಹೀಗೆ ಸಮಸ್ಯೆಗಳ ಸಾಲು ಇರುವಾಗ ಬಿಜೆಪಿ ಜನರ ಭಾವನೆಗಳಿಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ.