

ಕಲಘಟಗಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿದ್ದರೂ ಕಲಘಟಗಿಯಲ್ಲಿ ಜನರು ಅಲ್ಲಲ್ಲಿ ಗುಂಪು ಗುಂಪಾಗಿ ಸುತ್ತಾಡುತ್ತಿರುವುದನ್ನು ಮನಗಂಡ ಸಾರ್ವಜನಿಕರು ಪಟ್ಟಣದ ಎಲಿ ಪೇಟೆ, ಅಕ್ಕಿ ಪೇಟೆ, ಬೆಂಡಿಗೇರಿ ಓಣಿ, ಚೌಡಿಕೂಟ, ಅಬ್ಬಾಭಟ್ ಕ್ರಾಸ್ಗಳಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಓಣಿಗಳಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲು ದುಂಡಿ, ಬ್ಯಾರಿಕೇಡ್, ಗಿಡಗಂಟಿಗಳನ್ನು ಇಟ್ಟು ದಿಗ್ಬಂಧನ ವಿಧಿಸಿದ್ದಾರೆ. ತಮ್ಮ ಓಣಿಯಲ್ಲಿನ ಜನರು ಆರೋಗ್ಯದಿಂದಿದ್ದು ಯಾರೂ ಬೇರೆ ಕಡೆಯಿಂದ ಬರುವ ಹಾಗಿಲ್ಲ ಹಾಗೂ ಹೋಗುವ ಹಾಗಿಲ್ಲ ಎಂಬ ದೃಷ್ಟಿಕೋನದಿಂದ ಕರೊನಾ ಸೋಂಕು ಹರಡುವಿಕೆ ತಡೆಗೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.