ಗಿಡ-ಮರಗಳೇ ಮನುಷ್ಯ ನಿಜವಾದ ಮಿತ್ರರು

CTD MURUAG MATA SASI-KS NAVIN.jpg------
Published on

ಚಿತ್ರದುರ್ಗ: ಗಿಡ-ಮರಗಳೇ ಮನುಷ್ಯನ ನಿಜವಾದ ಮಿತ್ರರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವ ಕು ಮಾರ ಸ್ವಾಮೀಜಿ ಹೇಳಿದರು.

ಶ್ರೀಮಠ,ಎಸ್‌ಜೆಎಂ ವಿದ್ಯಾಪೀಠ,ಹಾಗೂ ಶ್ರೀ ಬೃಹನ್ಮಠ ಪಪೂ ಕಾಲೇಜು ಆಶ್ರಯದಲ್ಲಿ ವಿಶ್ವಪರಿಸರ ದಿ ನದ ಅಂಗವಾಗಿ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ‌್ಯಕ್ರಮ ಸಾನ್ನಿಧ್ಯ ವಹಿಸಿ ಮಾ ತನಾಡಿದ ಶ್ರೀಗಳು, ಗಿಡ, ಮರಗಳು ಯಾವುದೇ ಪ್ರತಿಫಲ ಅಪೇಕ್ಷಿಸಿದೆ ನಮಗೆ ನೆರಳು,ಗಾಳಿ ನೀಡುತ್ತವೆ. ಶ್ರೀಮಠದ ಎಲ್ಲ ಮಹಾಸನ್ನಿಧಿಯವರ ಕಾಲಘಟ್ಟದಲ್ಲಿ ಪರಿಸರ ಬೆಳೆಸುವ ಕಾರ್ಯ ನಡೆದಿದೆ ಎಂದರು.

ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ,ಭಾರತದಲ್ಲಿ ಶೇ.30 ವಿಸ್ತೀರ್ಣದ ಅರಣ್ಯವಿರಬೇಕೆಂದು ನಿರ್ಧರಿಸಿರುವ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ರೂಪಿಸಿವೆ ಎಂದರು. ಶ್ರೀ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಕೇತೇ ಶ್ವರ ಸ್ವಾಮೀಜಿ ಮಾತನಾಡಿ,ನಾವು ನಿತ್ಯವೂ ಪರಿಸರ ದಿನವನ್ನು ಆಚರಿಸಬೇಕೆಂದರು. ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಮಾತನಾಡಿ,ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ,ಮನುಷ್ಯ ಪರಿಸರದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಪ್ರಕೃತಿ ಮೀರಿದ ನಡವಳಿಕೆ ಅ ಪಾಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಎಚ್ಚರಿಸಿದರು. ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ ಮಾತನಾಡಿದರು.

ಅರಣ್ಯಇಲಾಖೆಯ ಬಸವರಾಜ್,ಎಚ್.ಟಿ.ಪ್ರಭುಶಂಕರ್,ಎಲ್.ಪಿ.ಚಾಂದ್,ವಿವಿಧ ಸಮಾಜಗಳ ಮುಖಂಡರಾದ ಬಾಬುಲಾಲ್ ಪಟಿಯಾತ್,ಎಚ್.ಸಿ.ನಿರಂಜನಮೂರ್ತಿ,ಶಂಕರಾಚಾರ್,ಎಚ್‌ಎಸ್‌ಟಿ ಸ್ವಾಮಿ,ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಸನ್ನಕುಮಾರ್,ಬಸವ ರಾಜ್,ನಾಗರಾಜ್‌ಸಂಗಂ ಇತರರು ಇದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಎಸ್‌ಜೆಎಂಐಟಿ ಪ್ರಾಂಶುಪಾಲ ಡಾ.ಪಿ.ಬಿ.ಭರತ್ ಸ್ವಾಗತಿಸಿದರು. ಡಾ.ಎಚ್.ಜೆ.ಲೋಕೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net