ಗಿಡ ನೆಡುವುದರೊಂದಿಗೆ ಪರಿಸರ ಜಾಗೃತಿ

7ark-1
ಅರಕಲಗೂಡು ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನೀರೆರೆಯಲಾಯಿತು. ಆನಂದ್, ರಾಧಾ, ಸುನೀಲ್ ಕುಮಾರ್ ಇತರರು ಇದ್ದರು.
Published on

ಅರಕಲಗೂಡು: ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಸವಾಪಟ್ಟಣ ವಲಯದ ವತಿಯಿಂದ ಬುಧವಾರ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಅಧ್ಯಕ್ಷ ಆನಂದ್ ಮಾತನಾಡಿ, ಸಾಮಾಜಿಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ರೈತರ ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಮತ್ತು ಪ್ರಕೃತಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗ್ರಾಮದ ರೈತ ಜಿ.ಎಸ್. ರವಿ ಅವರ ಜಮೀನಿನಲ್ಲಿ ಗಿಡಗಳನ್ನು ನೆಡಲಾಯಿತು. ರೈತರಿಗೆ ವಿವಿಧ ಜಾತಿಯ 350 ಗಿಡಗಳನ್ನು ವಿತರಿಸಲಾಯಿತು. ಸಂಘದ ವಲಯ ಮೇಲ್ವಿಚಾರಕಿ ರಾಧಾ, ಕೃಷಿ ಮೇಲ್ವಿಚಾರಕರಾದ ಸುನೀಲ್ ಕುಮಾರ್, ರವೀಶ್, ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net