

ಕುಶಾಲನಗರ: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಹಸಿರು ನಿಧಿ ಅಭಿಯಾನದಡಿ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಸ್‌ಡಿಎಂಸಿ ಸಹಯೋಗದಲ್ಲಿ ಕೂಡ್ಲೂರು ಗ್ರಾಮದ ಶಾಲಾ ಮೈದಾನದಲ್ಲಿ ಗಿಡ ನೆಡುವ ವನಸಿರಿ ಅಭಿಯಾನಕ್ಕೆ ಮಂಗಳವಾರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಚಾಲನೆ ನೀಡಿದರು.
ಪ್ರತಿ ವರ್ಷ ನಿಗದಿತ ಪ್ರಮಾಣದಲ್ಲಿ ವನಸಿರಿ ಯೋಜನೆಯಡಿ ಗಿಡ ನೆಟ್ಟು ಬೆಳೆಸುವ ಯೋಜನೆ ಯನ್ನು ಈ ಶಾಲೆಯಿಂದ ಆರಂಭಿಸಲಾಗಿದೆ. ಪ್ರತಿ ವರ್ಷ 500 ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಲು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಂಘದ ನಿರ್ದೇಶಕ, ವಕೀಲ ಆರ್.ಕೆ.ನಾಗೇಂದ್ರಬಾಬು, ಕಾವೇರಿ ನದಿ ಸಂರಕ್ಷಣಾ ವೇದಿಕೆಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಗ್ರಾ.ಪಂ.ಸದಸ್ಯ ಕೆ.ಕೆ.ಭೋಗಪ್ಪ, ವಲಯ ಅರಣ್ಯಾ ಧಿಕಾರಿ ಕೆ.ವಿ.ಶಿವರಾಂ ಮಾತ ನಾಡಿದರು. ಸಂಘದ ನಿರ್ದೇಶಕರು, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಶಾಲಾವರಣದಲ್ಲಿ 75 ಗಿಡಗಳನ್ನು ನೆಟ್ಟು, ಗೊಬ್ಬರ ಹಾಕಿ, ಗಿಡಗಳಿಗೆ ಟ್ರೀ ಗಾರ್ಡ್ ಹಾಕಲಾಯಿತು.
ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹೀರ್, ಅಭಿಯಾನದ ಸಂಯೋಜಕ ವಿ.ಸಿ.ಅಮೃತ್, ನಿರ್ದೇಶಕರಾದ ಆರ್.ಕೆ.ನಾಗೇಂದ್ರಬಾಬು, ಎಂ.ವಿ. ನಾರಾಯಣ, ಬಿ.ರಾಮಕೃಷ್ಣ, ರೇಖಾ ರಾಜಶೇಖರ್, ಕೆ.ಎಸ್.ಮಹೇಶ್, ಕೆ.ಸುರೇಶ್ ಕುಮಾರ್, ಎನ್.ಇ. ಶಿವಪ್ರಕಾಶ್, ಎನ್.ನವೀನ್, ಕೆ.ಪಿ.ಶರತ್, ಸಿಇಒ ಶ್ರೀಜೇಶ್, ವ್ಯವಸ್ಥಾಪಕ ಆರ್.ರಾಜು, ಕೂಡು ಮಂಗಳೂರು ಗ್ರಾ.ಪಂ.ಉಪಾಧ್ಯಕ್ಷ ಭಾಸ್ಕರ್ ನಾಯಕ್, ಮಾಜಿ ಅಧ್ಯಕ್ಷ ಕೆ.ಪಿ.ಕೃಷ್ಣ, ಸದಸ್ಯರಾದ ಕೆ.ಕೆ.ಭೋಗಪ್ಪ, ಶಿವಮ್ಮ, ಕುಮಾರ್, ಶಶಿಕಲಾ, ಎಸ್‌ಡಿ ಎಂಸಿ ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ, ಉಪಾಧ್ಯಕ್ಷೆ ಉಷಾ, ಸದಸ್ಯ ಜವರಯ್ಯ, ಸ್ಥಳೀಯ ಪ್ರಮುಖರಾದ ಕೆ.ಎಸ್.ರಾಜಾಚಾರಿ, ಕೆ.ಕೆ.ಪವನ ಕುಮಾರ್, ಪರಮೇಶ್, ವಿಮಲ್ ಶಿಕ್ಷಕರು ಇದ್ದರು.