

ಹಗರಿಬೊಮ್ಮನಹಳ್ಳಿ: ಪಟ್ಟಣದ ಕೆವಿಒಆರ್ ಕಾಲನಿಯ ಪತ್ರಿಬಸವೇಶ್ವರ ದೇಗುಲದ ಬಳಿ ಮಂಗಳವಾರ ಗಾಳಿಗೆ ಮರ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಆರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗಾಳಿಗೆ ಮರ ವಿದ್ಯುತ್ ಲೈನ್ ಮೇಲೆ ಬಿದ್ದ ಪರಣಾಮ ಆರು ಕಂಬಗಳು ಮುರಿದುಬಿದ್ದವು. ಇದರಿಂದಾಗಿ ಕಾರು, ಬೈಕ್ ಜಖಂಗೊಂಡಿವೆ. ಜೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ಆಗಮಿಸಿ ಮುಂದಿನ ಕಾರ್ಯಚಾರಣೆ ಕೈಗೊಂಡರು.