

ಹನೂರು: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ವಿವಿಧೆಡೆ ಭಾನುವಾರ ಗುಡುಗು, ಗಾಳಿ ಸಹಿತ ಸುಮಾರು ಒಂದು ಗಂಟೆ ಕಾಲ ಜೋರು ಮಳೆಯಾಗಿದೆ.
ಹನೂರಿನಲ್ಲಿ ಮಧ್ಯಾಹ್ನ 3:30ರಲ್ಲಿ ಪ್ರಾರಂಭವಾದ ಜೋರು ಮಳೆ ಒಂದು ಗಂಟೆಗಳ ಕಾಲ ಸುರಿಯಿತು. ಈ ವೇಳೆ ಪಟ್ಟಣದ ಬಾಲರಾಜು ಅವರ ಮನೆ ಮೇಲೆ ಗೊಬ್ಬಳಿ ಮರ ಉರುಳಿ ಬಿದ್ದ ಪರಿಣಾಮ ನೀರಿನ ಟ್ಯಾಂಕ್ ಹಾನಿಯಾಗಿದ್ದರೆ, ಇತ್ತ ಅಂಬೇಡ್ಕರ್ ನಗರದಲ್ಲಿ ಎರಡು ಮರಗಳು ಉರುಳಿದೆ. ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಲೊಕ್ಕನಹಳ್ಳಿ, ಮಂಗಲ, ಗುಂಡಾಪುರ, ಬೂದುಬಾಳು, ಅನಾಪುರ, ಕಣ್ಣೂರು, ಕಾಮಗೆರೆ ಹಾಗೂ ಈ ಭಾಗದ ಇನ್ನಿತರ ಕೆಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ.