ಗಾಲಿಕುರ್ಚಿ, ವಾಕರ್ ನೆರವು

2 gkp 01
ಅಂಗವಿಕಲರಿಗೆ ವ್ಹೀಲ್‌ಚೇರ್ ವಿತರಿಸಿದ ಕುಷಿಯಲ್ಲಿ ಯಶೋದಾ ವತ್ಸಲಾ.
Published on

ಗೋಣಿಕೊಪ್ಪ: ಅಂಗವಿಕಲ ಮಹಿಳೆಯೊಬ್ಬರು ತನ್ನಂತೆಯೇ ಅಂಗವೈಕಲ್ಯತೆಯಿಂದ ನಡೆಯಲಾಗದವರಿಗೆ ವ್ಹೀಲ್‌ಚೇರ್ ಒದಗಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.

ಗೋಣಿಕೊಪ್ಪದ ಕಂಜಿತಂಡ ಯಶೋದಾ ವತ್ಸಲಾ ಅವರು ದಾನಿಗಳ ಸಹಾಯದೊಂದಿಗೆ, ಬೆಂಗಳೂರಿನ ಪ್ರೊ ವಿಷನ್ ಏಷಿಯಾ ಸಂಸ್ಥೆಯ ಸಹಕಾರದಲ್ಲಿ 15 ಜನರಿಗೆ ಸುಮಾರು 2.25 ಲಕ್ಷ ರೂ. ಮೌಲ್ಯದ ಗಾಲಿಕುರ್ಚಿ, ಇಬ್ಬರಿಗೆ ವಾಕರ್ ಒದಗಿಸಿಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಅಂಗವಿಕಲತೆಯಿಂದ ಬಳಸುತ್ತಿರುವ ಸಾಕಷ್ಟು ಜನರು ಗಾಲಿ ಕುರ್ಚಿ ಖರೀದಿ ಮಾಡಲಾಗದೆ ಸಂಕಷ್ಟ ಅನುಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಪ್ರೊ ವಿಷನ್ ಏಷಿಯಾ ಸಂಸ್ಥೆಯ ಮೊರೆ ಹೋದರು. ಹಲವು ತಿಂಗಳಿನಿಂದ ನಿರಂತರವಾಗಿ ಸಂಪರ್ಕ ಸಾಧಿಸಿ ಕುರ್ಚಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಇತ್ತೀಚೆಗೆ ಸಲಕರಣೆ ಹಸ್ತಾಂತರ ಕಾರ್ಯಕ್ರಮದಲ್ಲಿ ವಿರಾಜಪೇಟೆ, ಪೊನ್ನಂಪೇಟೆ ತಾಲೂಕಿನ 17 ಫಲಾನುಭವಿಗಳು ಕುರ್ಚಿ ಪಡೆದು ಖುಷಿಪಟ್ಟರು.

ಸರ್ಕಾರಕ್ಕೂ ಮಾದರಿ: ಗ್ರಾಮ ಪಂಚಾಯಿತಿ ಮೂಲಕ ಅಂಗವಿಕಲರಿಗೆ ನೀಡಬೇಕಾದ ಸವಲತ್ತು ಕಲ್ಪಿಸಿ ಸರ್ಕಾರಕ್ಕೂ ಮಾದರಿಯಾಗಿದ್ದಾರೆ. ಆರ್ಥಿಕವಾಗಿ ಸಾಕಷ್ಟು ಅವಕಾಶವಿದ್ದರೂ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ಸವಲತ್ತು ಪಡೆಯಲಾಗದ ಫಲಾನುಭವಿಗಳ ಕೊರತೆ ನೀಗಿಸಿ ಸೈ ಎನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net