

ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಬಳ್ಳಾರಿ : ಪ್ರತಿಷ್ಟಿತ ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್ ವತಿಯಿಂದ ಆಯೋಜಿಸಿರುವ ಉಚಿತ ಹೇರ್ ಕಲರಿಂಗ್ ಅಭಿಯಾನ ನಗರದಲ್ಲಿ ಸೋಮವಾರ ನಡೆಯಿತು.
ಇಲ್ಲಿನ ಗುಗ್ಗರಹಟ್ಟಿ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ಕೌಲಬಜಾರ ಬಳಿ ಹೇರ್ ಕಲರಿಂಗ್ ಉಚಿತವಾಗಿ ಮಾಡಲಾಯಿತು.
ಅಭಿಯಾನದ ಆರನೇ ದಿನವೂ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ನೂರಾರು ಜನರು ಆಸಕ್ತಿಯಿಂದ ಅಭಿಯಾನದ ಸ್ಥಳಕ್ಕೆ ಆಗಮಿಸಿ ಗಾರ್ನಿಯರ್ ಸಂಸ್ಥೆಯ ಉಚಿತ ಹೇರ್ ಕಲರ್ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಅಭಿಯಾನವು ಮೇ 31 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿದ್ದು, ಮೇ 21 ರಂದು ಬೆಳಗ್ಗೆ 7ರಿಂದ ಅಲ್ಲಿಪುರ ಹಾಗೂ ಸಂಜೆ ವೀರಶೈವ ಕ್ಯಾಂಪಸ್ ಬಳಿ ಉಚಿತ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಮೊ. 8217619092, 7996219295, 8884432680 ಗೆ ಸಂಪರ್ಕಿಸಬಹುದು.