ಗಾಯಾಳು ಆರೋಗ್ಯ ವಿಚಾರಿಸಿದ ಶಾಸಕ

10Rajesh13
Published on

ಚಾಮರಾಜನಗರ: ತಾಲೂಕಿನ ಬೇಡಗುಳಿ ಸಮೀಪದ ರಾಮಯ್ಯನಪೋಡುವಿನಲ್ಲಿ ಹುಲಿ ದಾಳಿಯಿಂದ ಗಾಯಗೊಂಡು ಸಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ರವಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ವೈಯಕ್ತಿಕ ವಾಗಿ ಪರಿಹಾರ ನೀಡಿದರು. ನಂತರ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದುಕೊಡರು. ಈ ಸಂದರ್ಭದಲ್ಲಿ ಡಾ.ಮಾರುತಿ, ತಾಪಂ ಮಾಜಿ ಸದಸ್ಯ ಕುಮಾರ್‌ನಾಯಕ್, ಬೇಡಗುಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಾನಾಯಕ್,ಮುಖಂಡ ಶಂಕರ್ ಮತ್ತು ವಿನೋದ್, ವೈದ್ಯಾಧಿಕಾರಿಗಳಿದ್ದರು.

ಗಾಯಾಳು ರವಿ ಮೇಲೆ ಹುಲಿ ದಾಳಿ ಮಾಡಿದ ವೇಳೆ ತಲೆಯ ಮೇಲೆ ಪರಚಿರುವುದರಿಂದ ಚರ್ಮ ಕಿತ್ತು ಹೋಗಿದ್ದು, ಇದಕ್ಕೆ ಹೊಲಿಗೆ ಹಾಕಲಾಗಿದೆ. ತೊಡೆಯ ಮೂಳೆಗೆ ಸ್ವಲ್ಪ ಪೆಟ್ಟಾಗಿದೆ. ಚಿಕಿತ್ಸೆಯಿಂದಾಗಿ ರವಿ ಆರೋಗ್ಯ ಸ್ಥಿರವಾಗಿದೆ. ಡಾ.ಮಾರುತಿ, ಕೀಲು ಮತ್ತು ಮೂಳೆ ರೋಗ ತಜ್ಞ, ಸಿಮ್ಸ್, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net