

ಕೊಪ್ಪಳ: ನಗರದ ಆರಾಧ್ಯ ದೈವ ಗವಿಮಠದ ಗವಿಸಿದ್ದೇಶ್ವರನ ದರ್ಶನಕ್ಕೆ ಬಂದಿದ್ದ ಭಕ್ತನೋರ್ವ ತಲೆ ಸುತ್ತಿ ಬಿದ್ದು ಗಾಯಗೊಂಡಿದ್ದು, ತಕ್ಷಣ ನೆರವಿಗೆ ಧಾವಿಸಿದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಗ್ರಾಮದ ರಾಘವೇಂದ್ರ ಗಾಯಗೊಂಡಾತ. ಮಠದ ಮುಂಭಾಗದಲ್ಲಿ ಬೈಕ್ ಮೇಲಿದ್ದಾಗ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದಾನೆ. ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ಬೀಳುವುದನ್ನು ಗಮನಿಸಿದ ಗವಿಶ್ರೀಗಳು ತಕ್ಷಣ ಓಡಿ ಬಂದಿದ್ದಾರೆ. ಸ್ಥಳದಲ್ಲಿದ್ದ ಕೆಲವರ ಸಹಾಯದಿಂದ ಬೈಕ್ ಮೇಲೆತ್ತಿಸಿದರು. ಬಳಿಕ ಮಠದ ಎದುರಿನ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಗಾಯಾಳುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.