ಗಾಯತ್ರಿ ಕೋಟಿಯಜ್ಞ ಜಪ ಪಾರಾಯಣ

9SND-02
Published on

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿರುವ 24 ಕೋಟಿ ಗಾಯತ್ರಿ ಜಪ ಯಜ್ಞ ಪಾರಾಯಣಕ್ಕೆ ಪಂಡಿತ ರಾಮಬಾಬು ಶರ್ಮಾ ಸೋಮಯಾಜಿ ಭಾನುವಾರ ಚಾಲನೆ ನೀಡಿದರು.

ಬೆಳಗ್ಗೆ ಏಳು ಗಂಟೆಯಿಂದ ಒಂದು ತಾಸಿಗೂ ಹೆಚ್ಚು ಪಾರಾಯಣ ನಡೆಯಿತು. ನಂತರ ಮಾತನಾಡಿದ ಪಂಡಿತ ರಾಮಬಾಬು ಶರ್ಮಾ, ಮುಂದಿನ ಭಾನುವಾರ ಬೆಳಗ್ಗೆ 7.30ಕ್ಕೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಾರಾಯಣ ಜರುಗಲಿದೆ. ಪಾರಾಯಣ ಆಸಕ್ತಿಯುಳ್ಳವರು ಸಮಯಕ್ಕೆ ಸರಿಯಾಗಿ ಬರಬೇಕು. ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ರಾಜ್ಯ ಸಮಿತಿ ಸದಸ್ಯ ಪ್ರಹ್ಲಾದ ಗುಡಿ ವಕೀಲ, ಸಮ್ಮೇಳನದ ತಾಲೂಕು ಸಂಚಾಲಕ ಮನೋಹರರಾವ್ ಕುಲಕರ್ಣಿ, ಪ್ರಮುಖರಾದ ಹನುಮಂತಚಾರ ಬಾದರ್ಲಿ, ಸುಬ್ಬಾ ಶಾಸ್ತ್ರಿ, ಅಡವಿರಾವ್ ಸಿದ್ರಾಂಪುರ, ಸತ್ಯನಾರಾಯಣ ಕುಲಕರ್ಣಿ, ಜಗನ್ನಾಥ್ ಸಿದ್ರಾಂಪುರ, ಅಜಯ್ ಕಾನಿಹಾಳ, ರಾಘವೇಂದ್ರ ಸಾಸ್ವಿಹಾಳ್, ವಿಠ್ಠಲ್ ಕಲ್ಲೂರ, ಪ್ರಭಾಕರ ದೇಶಪಾಂಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net