ಗಾಯಗೊಂಡಿದ್ದ ಬಿಎಸ್‌ಎಫ್ ಯೋಧ ಸಾವು

subramanya, nidana
Published on


ಕೊಳ್ಳೇಗಾಲ: ಮನೆ ಮುಂಭಾಗದ ರಸ್ತೆಯಲ್ಲಿ ಆಯತಪ್ಪಿ ಬಿದ್ದು ತೀವ್ರ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಿಎಸ್‌ಎಫ್ ಯೋಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.


ತಾಲೂಕಿನ ಸಿದ್ದಯ್ಯನಪುರ ಗ್ರಾಮದ ನಿವಾಸಿ, ತಮಿಳುನಾಡು ಮೂಲದ ಕೆ.ಸುಬ್ರಮಣಿ (44) ಮೃತಪಟ್ಟ ಯೋಧ. 23 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಿದ್ದಯ್ಯನಪುರ ಗ್ರಾಮದಲ್ಲಿ ಕುಟುಂಬದ ಸದಸ್ಯರು ವಾಸವಾಗಿದ್ದರು. ಎರಡು ವಾರಗಳ ಹಿಂದೆಯಷ್ಟೆ ಪಶ್ಚಿಮ ಬಂಗಾಳದಿಂದ ರಜೆ ಮೇಲೆ ಮನೆಗೆ ಬಂದಿದ್ದರು. ನ.24ರಂದು ಮನೆ ಮುಂದಿನ ರಸ್ತೆಯಲ್ಲಿ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಮೃತಪಟ್ಟರು. ಸೋಮವಾರ ಸಿದ್ದಯ್ಯನಪುರಕ್ಕೆ ತರಲಾಯಿತು.


ತಾಲೂಕಿನ ಸಿದ್ದಯ್ಯನಪುರದ ಯೋಧನ ಮನೆ ಮುಂದೆ ಸೋಮವಾರ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಪಟ್ಟಣ ಪಿಎಸ್‌ಐ ಚೇತನ್, ಶಿರಸ್ತೇದಾರ್ ಶ್ರೀನಿವಾಸ್, ಆರ್‌ಐ ನಿರಂಜನ್ ಇತರರು ಇದ್ದರು. ಬಳಿಕ ತಮಿಳುನಾಡಿಗೆ ತೆಗೆದುಕೊಂಡು ಹೋಗಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net