ಗಾಯಗೊಂಡಿದ್ದ ಅಪರಿಚಿತ ಸಾವು

8
Published on

ಮೈಸೂರು: ಅಪಘಾತಗೊಂಡು ಅಪರಿಚಿತ ವ್ಯಕ್ತಿಯ ಮೃತಪಟ್ಟಿದ್ದು, ಒಂದು ತಿಂಗಳಾದರು ವಾರಸುದಾರರು ಪತ್ತೆ ಆಗಿಲ್ಲ. ಜೂನ್ 9ರಂದು ನರಸಿಂಹರಾಜ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ನೆಲ್ಸನ್ ಮಂಡೇಲಾ ರಸ್ತೆಯ ಹನುಮಂತ ನಗರ ಕ್ರಾಸ್ ಬಳಿಯಲ್ಲಿ ಅಪರಿಚಿತ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅಪರಿಚಿತ ಮೃತಪಟ್ಟಿದ್ದಾರೆ. ಆದರೆ, ಈವರೆಗೆ ವಾರಸುದಾರರು ಪತ್ತೆಯಾಗದೆ ಮೃತದೇಹ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸುಮಾರು 45 ರಿಂದ 55 ವರ್ಷ ವಯಸ್ಸಾಗಿದ್ದು, 6 ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು, ಬಿಳಿಗಡ್ಡ ಮೀಸೆ ಬಿಟ್ಟಿದ್ದು. ಬಿಳಿ ತಲೆಕೂದಲು ಮುಂಭಾಗದಲ್ಲಿ ಬೊಕ್ಕ ತಲೆ ಹೊಂದಿದ್ದಾರೆ. ಬಲಗೈನಲ್ಲಿ ಮಂಗಳಮ್ಮ ಎಂದು ಅಚ್ಚೆ ಇದೆ. ಈ ವ್ಯಕ್ತಿಯ ವಾರಸುದಾರರು ಕಂಡು ಬಂದಲ್ಲಿ ನರಸಿಂಹರಾಜ ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net