

ಬೈಲಹೊಂಗಲ, ಬೆಳಗಾವಿ: ಪಟ್ಟಣದ ಮುರಗೋಡ ರಸ್ತೆಯಲ್ಲಿರುವ ಪೃಥ್ವಿ ಗಾರ್ಡನ್‌ನಲ್ಲಿ ಜಿಲ್ಲಾಮಟ್ಟದ ಗಾಣಿಗ ಸಮಾಜದ ಸಮಾವೇಶ, ನೌಕರರ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಸೆ.18 ರಂದು ಬೆಳಗ್ಗೆ 10 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ರಮೇಶ ಉಟಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಹಾಗೂ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾ ಗಾಣಿಗ ಸಂಘ, ಜಿಲ್ಲಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ, ತಾಲೂಕು ಘಟಕದ ಸಹಯೋಗದಲ್ಲಿ ಸಮಾವೇಶ ಜರುಗಲಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಇಂಚಲ ಕ್ರಾಸ್‌ನಿಂದ ಸುಮಂಗಲೆಯರ ಕುಂಭಮೇಳ ಜರುಗಲಿದೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಿಜಯಪುರ ಗಾಣಿಗ ಗುರುಪೀಡಿಠದ ಡಾ.ಜಯಬಸವಕುಮಾರ ಸ್ವಾಮೀಜಿ, ಕೊಲ್ಹಾರದ ಕಲ್ಲಿನಾಥ ದೇವರು, ಬೆಳಗಾವಿಯ ನಿಲಜಿ ಅಲೌಖಿಕ ಜ್ಞಾನ ಮಂದಿರದ ಶಿವಾನಂದ ಗುರೂಜಿ ವಹಿಸಲಿದ್ದಾರೆ.
ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬಗಳಾಂಭದೇವಿ ದೇವಸ್ತಾನದ ವೀರಯ್ಯಸ್ವಾಮಿ ಹಿರೇಮಠ ಸಮ್ಮುಖ ವಹಿಸಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ರಮೇಶ ಉಟಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರಾದ ಮಂಗಲ ಅಂಗಡಿ, ಪಿ.ಸಿ. ಗದ್ದಿಗೌಡರ, ಶಾಸಕರಾದ ಮಹಾಂತೇಶ ದೊಡಗೌಡರ, ರಮೇಶ ಬೂಸನೂರ, ಆನಂದ ನ್ಯಾಮಗೌಡ್ರ, ಬಿ.ಕೆ.ಸಂಗಮೇಶ, ಹಣಮಂತ ನಿರಾಣಿ, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಉಪಸ್ಥಿತರಿರಲಿದ್ದಾರೆ ಎಂದರು. ತಾಲೂಕಾಧ್ಯಕ್ಷ ಗಂಗಾಧರ ಗಿರಿಜನ್ನವರ ಪ್ರವೀಣ ಗಾಣಿಗೇರ, ವಿರೂಪಾಕ್ಷ ಕಟ್ಟಿಮನಿ, ಶಂಕರ ಗಾಣಿಗೇರ, ಶಿವಪುತ್ರಪ್ಪ ಹತ್ತರಕಿ, ಯಲ್ಲಪ್ಪ ಗಾಣಿಗೇರ, ಪ್ರಕಾಶ ಗಾಣಗಿ, ರೇವಪ್ಪ ಗಾಣಿಗೇರ, ಗಂಗಾಧರ ಮಡ್ಡಿಮನಿ, ರಾಜೀವ ಗಾಣಗಿ, ಗಂಗಾಧರ ಕಲ್ಯಾಣಿ, ಬಸವರಾಜ ಹೊಂಗಲ ಇದ್ದರು.