ಗಾಣಿಗ ಸಮಾಜದ ಮೀಸಲಾತಿ ಹೋರಾಟದ ಚರ್ಚೆ ಇಲ್ಲ, ಬಸ್ ದರ ಏರಿಕೆಯೂ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ

IMG-20210227-WA0036
Published on

ವಿಜಯಪುರ: ಗಾಣಿಗ ಸಮಾಜದ ಮೀಸಲಾತಿ ಹೋರಾಟದ ಬಗ್ಗೆ ಯಾವುದೆ ಚರ್ಚೆ ನಡೆದಿಲ್ಲ.ಅದರ ಬಗ್ಗೆ ಯೋಚನೆಯೂ ಇಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅಲ್ಲದೆ ನಮ್ಮ ಸಮಾಜಕ್ಕೀಗ ೨ ಎ ಮೀಸಲಾತಿ ಇದೆ. ಆದ್ದರಿಂದ ಕಲ್ಲಿನಾಥ ಸ್ವಾಮೀಜಿ ಇಂತಹ ಹೇಳಿಗಳನ್ನು ಕೊಡುವುದು ಸರಿಯಲ್ಲ ಎಂದು ಶನಿವಾರ ವಿಜಯಪುರ ಸಾರಿಗೆ ಕಚೇರಿ ಶಂಕು ಸ್ಥಾಪನೆ ಸಮಾರಂಭದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇನ್ನು ಸಿಂದಗಿ ಮತಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಸ್ಥಳೀಯರಲ್ಲೇ ಸೂಕ್ತರನ್ನು ಆಯ್ಕೆ ಮಾಡಿ ಗೆಲ್ಲಿಸಿ ತರುತ್ತೇನೆ. ಸುಮ್ನೆ ಮಾಧ್ಯಮದವರು ನನ್ನ ಹೆಸರು ಪ್ರಸ್ತಾಪಿಸಿ ಕಾಗೆ ಹಾರಿಸುತ್ತಿದ್ದಾರೆ ಎಂದರು.

ಇನ್ನು 18 ಗಂಟೆಯಲ್ಲಿ 24 ಕಿಮೀ ವಿಜಯಪುರ ಸೋಲಾಪುರ ರಸ್ತೆ ನಿರ್ಮಾಣ ಮಾಡಿದ ಕಾರ್ಮಿಕರ ಸಾಧನೆಗೆ ಶುಭಾಶಯ. ಇನ್ನು ಕೇಂದ್ರ ಸಾರಿಗೆ ಸಚಿವರಿಗೂ ಅಭೂತ ಪೂರ್ವ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವ ನಿತೀನ ಗಡ್ಕರಿ ಅವರನ್ನು ರೋಡಕರಿ ಅಂತಾ ಕರಿಯುತ್ತಿದ್ದಾರೆ ಎಂದರು.

ಬಸ್ ದರ ಹೆಚ್ಚಳ ಇಲ್ಲ: ಬಸ್ ದರ ಹೆಚ್ಚಳ ಇಲ್ಲವೇ ಇಲ್ಲ.ದರ ಹೆಚ್ಚಳದ ಪ್ರಸ್ತಾವಣೆ ಇಲ್ಲವೇ ಇಲ್ಲಾ ಎಂದು ವಿಜಯಪುರದಲ್ಲಿ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟ ಪಡಿಸಿದರು.ಕೊರೊನಾದಲ್ಲಿ ಜನರು ತೊಂದರೆಯಲ್ಲಿದ್ದಾರೆ.ಕಳೆದ ವರ್ಷವೇ ಹೆಚ್ಚಳ ಮಾಡಲಾಗಿದೆ.ಈಗ ದರ ಹೆಚ್ಚಳ ಮಾಡೋದಿಲ್ಲ ಎಂದರು. ಇನ್ನು ದರ ಹೆಚ್ಚಳದ ಪ್ರಸ್ತಾವನೆಯು ಇಲ್ಲಾ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net