ಗಾಜನೂರಿಗೆ ಶಿವಣ್ಣ ಮತ್ತು ಗೀತಾ ಭೇಟಿ

12Rajesh6
Published on

ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರಿಗೆ ಚಿತ್ರನಟ ಡಾ.ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಬುಧವಾರ ಭೇಟಿ ನೀಡಿದರು.

ಡಾ.ರಾಜ್‌ಕುಮಾರ್ ಹುಟ್ಟೂರು ಗಾಜನೂರಿನಲ್ಲಿರುವ ನಿವಾಸಕ್ಕೆ ಮಧ್ಯಾಹ್ನ ಆಗಮಿಸಿದರು. ಸೋದರ ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ನಾಗಮ್ಮ ಶಿವರಾಜ್‌ಕುಮಾರ್ ಮತ್ತು ಗೀತಾ ಅವರ ಕೈ ಹಿಡಿದು ಮಾತನಾಡಿಸಿ ಅಕ್ಕರೆ ತೋರಿ ಆಶೀರ್ವಾದ ಮಾಡಿದರು. ಭೇಟಿ ವಿಷಯ ತಿಳಿದು ಮನೆಗೆ ಆಗಮಿಸಿದ ಅಭಿಮಾನಿಗಳೊಂದಿಗೆ ಶಿವರಾಜ್‌ಕುಮಾರ್ ಪೋಟೋ ತೆಗೆಸಿಕೊಂಡರು. ಸಂಜೆ ವೇಳೆಗೆ ಗಾಜನೂರಿನಿಂದ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಹೊರಟರು. ಈ ಕುರಿತು ಅವರ ಸೋದರ ಮಾವ ಗೋಪಾಲ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಕಾರ್ಯ ನಿಮಿತ್ತ ಮೈಸೂರಿಗೆ ಬಂದಿದ್ದ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಗಾಜನೂರಿಗೆ ಬಂದು ತಾಯಿ ನಾಗಮ್ಮ ಅವರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿ ಹೊರಟರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net