ಗಾಂಧೀಜಿಯ ಅಹಿಂಸಾ ತತ್ವ ಪಾಲಿಸಿ

15,-kkr1(8-23
Published on

ಕಿಕ್ಕೇರಿ: ಪಟ್ಟಣದ ಆರಕ್ಷಕ ಠಾಣೆಯಲ್ಲಿ ಮಂಗಳವಾರ 77ನೇ ಸ್ವಾತಂತ್ರೃ ದಿನ ಆಚರಿಸಲಾಯಿತು.

ಇನ್ಸ್‌ಪೆಕ್ಟರ್ ರೇವತಿ ಮಾತನಾಡಿ, ಮಹಾತ್ಮ ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಸೇರಿದಂತೆ ಹಲವರು ಮಹನೀಯರ ತ್ಯಾಗ ಹಾಗೂ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಕ್ರೌರ್ಯ, ದ್ವೇಷ, ಅಸೂಯೆ, ಪ್ರತಿಷ್ಠೆಗಾಗಿ ಇಂದು ಎಲ್ಲೆಡೆ ಗಲಭೆ, ಅನಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಹೀಗಾಗಿ ಗಾಂಧೀಜಿಯವರ ಅಹಿಂಸಾ ತತ್ವವನ್ನು ಪಾಲಿಸಿದರೆ ಮಾತ್ರ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಆತ್ಮಕ್ಕೆ ಶಾಂತಿ ಲಭಿಸಲಿದೆ ಎಂದು ತಿಳಿ ಹೇಳಿದರು.

ಪಿಎಸ್‌ಐ ಸಿದ್ದಲಿಂಗ ಬಾನಸೆ, ಎಎಸ್‌ಐ ಕೆ.ಎಸ್.ರಮೇಶ್, ಸಿಬ್ಬಂದಿ ಕುಮಾರ್, ನಂಜುಂಡಸ್ವಾಮಿ, ಜಾಫರ್, ಬಸವರಾಜು, ಮಧುಸೂದನ್, ಪ್ರದೀಪ್, ಸಜಿನಿ, ಶಿಲ್ಪಾ, ಮಮತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net