ಗಾಂಧೀಜಿ ಸರಳತೆ ನಮಗೆಲ್ಲರಿಗೂ ಮಾದರಿ

ctd----00001
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು.
ಪ್ರಾಚಾರ‌್ಯ ಡಾ.ಪಿ.ಬಿ. ಭರತ್ ಮಾತನಾಡಿ, ಗಾಂಧೀಜಿ ಅವರು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಸರಳತೆ ನಮಗೆಲ್ಲ ಮಾದರಿಯಾಗಬೇಕು ಎಂದರು.
ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇತರರಿಗೂ ಸ್ವಚ್ಛತೆ ಅರಿವು ಮೂಡಿಸಬೇಕು. ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಜೈ ಜವಾನ್-ಜೈ ಕಿಸಾನ್ ಘೋಷಣೆ ಮೂಲಕ ದೇಶದ ಜನರಿಗೆ ಸೈನಿಕರ ಹಾಗೂ ಕೃಷಿಕರ ಮಹತ್ವ ತಿಳಿಸಿದ್ದಾರೆ ಎಂದರು.
ಡಾ.ಎನ್. ಜಗನ್ನಾಥ್, ಡಾ.ಕೆ.ಬಿ. ಸಿದ್ದೇಶ್, ಡಾ.ಜೆ.ಎಂ. ಶ್ರೀಶೈಲ, ಡಾ.ಎಚ್.ಕೆ. ಲೋಕೇಶ್, ಡಾ.ಕೆ. ಕುಮಾರಸ್ವಾಮಿ, ಡಾ.ಇ.ನಿರಂಜನ್, ಡಾ.ಎ.ಎಂ. ರಾಜೇಶ್, ಜಿ.ಎಸ್. ಪ್ರಭುಸ್ವಾಮಿ, ಸುನೀಲ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಜೈವಿಕ ಇಂಧನ ಮಾಹಿತಿ, ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದಿಂದ ಜೈವಿಕ ಇಂಧನ ಚಾಲನಾ ಪ್ರಾತ್ಯಕ್ಷಿಕೆ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net