ಗಾಂಧೀಜಿ ದೇಶಪ್ರೇಮ ದೇಶಕ್ಕೆ ಮಾದರಿ

02rajesh1
Published on

ಚಾಮರಾಜನಗರ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನದ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲ್ಲಿ ಮಹತ್ತರ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಾಂಧೀಜಿ ಹಾಗೂ ಶಾಸ್ತ್ರಿ ಅವರು ದೇಶ ಕಂಡಂತಹ ಮಹಾನ್ ವ್ಯಕ್ತಿಗಳಾಗಿದ್ದು ಇವರಿಬ್ಬರ ಜನ್ಮದಿನ ಒಂದೇ ಆಗಿರುವುದು ಭಾರತದ ಪಾಲಿಗೆ ಸುದಿನವಾಗಿದೆ.ಅವರ ಆದರ್ಶ ಜೀವನ, ತತ್ವಗಳು ಅವರು ನಡೆದು ಬಂದ ಹಾದಿಯನ್ನು ನೋಡಿದರೆ ನಿಜಕ್ಕೂ ದೇಶದ ಅಭಿವೃದ್ದಿಗೆ ಅವರ ಕೊಡುಗೆ ಏನೆಂಬುದು ತಿಳಿಯುತ್ತದೆ ಎಂದರು.

ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿ ಇಡೀ ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿಸಿದ ಧೀಮಂತ ನಾಯಕ ಗಾಂಧಿಯಾಗಿದ್ದು, ತ್ಯಾಗ,ನಿಸ್ವಾರ್ಥ ಮನೋಭಾವನೆ ಎಲ್ಲರಿಗೂ ಆದರ್ಶವಾಗಿದೆ. ಅವರು ತಂದುಕೊಟ್ಟ ಸ್ವಾತಂತ್ರ್ಯವನ್ನು ಇಂದು ನಾವೆಲ್ಲರೂ ಅನುಭವಿಸುತ್ತಿದ್ದೇವೆ.ಅವರ ಆದರ್ಶ ಮೌಲ್ಯಗಳನ್ನು ಸ್ವಚ್ಚತೆಯ ಪರಿಕಲ್ಪನೆ, ಗ್ರಾಮೀಣ ಕರಕುಶಲ ಉದ್ಯೋಗಕ್ಕೆ ಹೆಚ್ಚಿನ ಒತ್ತು, ಭಾರತದ ಸರ್ವತೋಮುಖ ಅಭಿವೃದ್ದಿಗೆ ಗಾಂಧೀಜಿ ನೀಡಿದ ಪ್ರಣಾಳಿಕೆಗಳಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ನಾಗರತ್ನಾ, ನಗರಸಭಾ ಸದಸ್ಯ ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸುಮರಿ, ನಸ್ರುಲ್‌ಖಾನ್, ಎಸ್ಸಿ-ಎಸ್ಟಿ ಜಾಗೃತಿ ಸಮಿತಿಯ ಪಿ.ಸಿದ್ದರಾಜು, ದೂಡ್ಡರಾಯಪೇಟೆ ರವಿಗೌಡ, ಪವನ್, ಅಲ್ಷಸಂಖ್ಯಾತ ವಿಭಾಗದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಮ್ರಾನ್ ಅಹಮದ್, ಕಾರ್ಯದರ್ಶಿ ಇರ್ಷದ್‌ಪಾಷ, ಅಪ್ಸರ್‌ಅಹಮದ್, ಪರ್ವೀಜ್ ಅಹಮದ್, ಸುಹೇಲ್‌ಖಾನ್, ಅಜ್ಜಲ್‌ಪಾಷ, ಸೈಯದ್‌ಇರ್ಷದ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net