ಗಾಂಧಿ ಹೋರಾಟ ಸ್ಮರಣೀಯ

02 CRP 01 (1)
ಚನ್ನರಾಯಪಟ್ಟಣ ತಾಲೂಕಿನ ದಿಡಗ ಗ್ರಾಮದ ಸರ್ಕಾರಿ ಫ್ರೌಢಶಾಲೆ ಆವರಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಡಿ.ಆರ್.ಮಂಜುನಾಥ್, ನೀಲಿಸಿದ್ದು, ಸತೀಶ್, ಮಂಜುನಾಥ್, ರಾಮು, ನಾಗೇಂದ್ರ, ಅನಿಲ್, ಅರುಣ್ ಇದ್ದರು.
Published on

ಡಿ.ಆರ್.ಮಂಜುನಾಥ್ ಅಭಿಮತ


ಚನ್ನರಾಯಪಟ್ಟಣ: ಸತ್ಯ ಹಾಗೂ ಅಹಿಂಸಾ ಮಾರ್ಗದ ಮೂಲಕ ದೇಶವೊಂದು ಸ್ವಾತಂತ್ರೃ ಪಡೆಯಲು ಸಾಧ್ಯ ಎಂಬುದನ್ನು ಪ್ರಪಂಚಕ್ಕೆ ತೋರಿಸಿದ ಅನನ್ಯ ರತ್ನ ಮಹಾತ್ಮ ಗಾಂಧಿ ಎಂದು ದಿಡಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.


ತಾಲೂಕಿನ ದಿಡಗ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುರ್ಷ್ಪಾಚರ್ನೆ ಮಾಡಿ ಮಾತನಾಡಿದರು.


ಪ್ರಜಾಪ್ರಭುತ್ವದ ನೆಲಗಟ್ಟಿಗೆ ಹೋರಾಟದ ಮೂಲಕ ಅಪಾರ ಶಕ್ತಿ ತುಂಬಿದ ಮಹಾನ್ ವ್ಯಕ್ತಿ ಗಾಂಧೀಜಿ. ಅವರ ಹುಟ್ಟುಹಬ್ಬವನ್ನು ಹೀಗಾಗಿ ಅವರ ಆದರ್ಶ ಹಾಗೂ ತತ್ವಗಳನ್ನು ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಫ್ರೌಢಶಾಲೆ ಮುಖ್ಯಶಿಕ್ಷಕ ನೀಲಿಸಿದ್ದು ಮಾತನಾಡಿದರು. ಉಪನ್ಯಾಸಕ ಸತೀಶ್, ಫ್ರೌಢಶಾಲೆ ಸಹಶಿಕ್ಷಕರಾದ ಮಂಜುನಾಥ್, ರಾಮು, ನಾಗೇಂದ್ರ, ಅನಿಲ್, ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net