ಗಾಂಧಿ ಸರ್ಕಲ್‌ಗೆ ಹೈಟೆಕ್ ಸ್ಪರ್ಶ

Oplus_131072
Oplus_131072
Published on

ಯಾದಗಿರಿ: ನಗರದ ಅತ್ಯಂತ ಹಳೆಯದಾದ ಮತ್ತು ಫೇಮಸ್ ಆಗಿರುವ `ಗಾಂಧಿ ಚೌಕ್'ನಲ್ಲಿರುವ ಮಹಾತ್ಮ ಗಾಂಧಿಜಿ ಮೂರ್ತಿ ಆವರಣ ಹಾಗೂ ಸುತ್ತಲಿನ ಸ್ಥಳಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ.ಇದರಿಂದಾಗಿ ಪ್ರತಿಮೆ ಆಕರ್ಷಣೆಗೊಳ್ಳಲಿದೆ ಅಲ್ಲದೆ ಪ್ರದೇಶದ ಸೌಂದರ್ಯ ಹೆಚ್ಚಿಸಲಿದೆ. ಇನ್ನೊಂದು ವಾರದಲ್ಲಿ ಪ್ರಗತಿ ಕೆಲಸಗಳು ಮುಗಿಯಲಿದ್ದು ಸಿಂಗಾರಗೊAಡ ಗಾಂಧಿ ತಾತ ಹೊಸರೂಪದಲ್ಲಿ ಜನರಿಗೆ ಕಾಣಿಸಿಕೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ್‌ರು ೧೯೭೦ರ ದಶಕದಲ್ಲಿ ಈ ಸರ್ಕಲ್‌ನಲ್ಲಿ ಗಾಂಧಿ ಮೂರ್ತಿ ಅನಾವರಣಗೊಳಿಸಿದ್ದರು.ಆಗಿನಿಂದ ಇದುವರೆಗೂ ಅದೇ ಸ್ಥಿತಿಯಲ್ಲಿತ್ತು. ಗಾಂಧಿಜೀ ಮೂರ್ತಿ ಸ್ಥಳವನ್ನು ಸೌಂದರ್ಯೀಕರಣಗೊಳಿಸಲು ಶಾಸಕ ಚನ್ನಾರರಡ್ಡಿ ಪಾಟೀಲ್ ತುನ್ನೂರು ಅವರು ಕೆಕೆಆರ್‌ಡಿಬಿಯ ಮೈಕ್ರೋ ಯೋಜನೆಯಡಿ ೧೫ ಲಕ್ಷ ರೂ ಅನುದಾನ ನೀಡಿ ಕೆಲಸ ಕೈಗೆತ್ತಿಕೊಂಡಿದ್ದರು. ಈಗದು ಅಂತಿಮ ಹಂತಕ್ಕೆ ಬಂದಿದೆ.

ಕಳೆದ ಐದು ದಶಕಗಳಿಂದ ಗಾಂಧಿ ತಾತನ ಮೂರ್ತಿಗೆ ನೆರಳು ಇರಲಿಲ್ಲ. ಬಿಸಿಲು, ಮಳೆ ಚಳಿಗಾಲದಲ್ಲೂ ಗಾಂಧಿ ತಾತ ಹಾಗೇಯೇ ಇರುತ್ತಿದ್ದ. ಜನ್ಮದಿನ,ಪುಣ್ಯ ಸ್ಮರಣೆ ಇನ್ನಿತರ ಕಾರ್ಯಕ್ರಮದಂದು ಮೂರ್ತಿಗೆ ತೊಳೆದು ಪೂಜೆ ಮಾಡಿ ಹೂವಿನ ಹಾರ ಹಾಕುವ ವಾಡಿಕೆ ಮಾತ್ರ ಇತ್ತು. ಆದರೆ, ತಾತನ ನಿಂತಿರುವ ಸ್ಥಳ ಸುಂದರಗೊಳಿಸಿ ನೆರಳು ಮಾಡುವ ಕಾಲ ಈಗ ಕೂಡಿಬಂದಿದೆ. ಅಲ್ಲಿ ಹೈಟಕ್ ಟಚ್ ನೀಡಲಾಗಿದೆ. ಸುತ್ತಲು ಕಂಬಗಳನ್ನು ನೆಟ್ಟು ಮೇಲ್ಬಾಗದಲ್ಲಿ ಯೂರೋಪ್ ದೇಶದಲ್ಲಿ ಸಿದ್ದವಾಗುವ ಡಾಂಬರ್ ರೂಫ್ (ಸಿಂಗಲ್ಸ್) ಹೊದಿಕೆ ಹಾಕಲಾಗಿದೆ.ಸುತ್ತಲ್ಲೂ ಸ್ಟೀಲ್ ಗ್ರಿಲ್ ಅಳವಡಿಸಲಾಗಿದೆ. ರಾತ್ರಿ ಹೊತ್ತು ಬಣ್ಣ,ಬಣ್ಣ ನೀರಿನ ಕಾರಂಜಿ ಜನತೆಯನ್ನು ಆಕರ್ಷಿಸಲಿದೆ. ಹೈಮಾಕ್ಸ್ ದೀಪ ಅಳವಡಿಸಿದ್ದು ಸಾಕಷ್ಟು ಬೆಳಕಾಗಲಿದೆ. ಕಟ್ಟೆಯ ಸುತ್ತಲೂ ಗ್ರಾÈನೈಟ್ ಹಾಸಲಾಗಿದ್ದು, ಐದಾರು ದಿನಗಳಲ್ಲಿ ಎಲ್ಲ ಕೆಲಸ ಮುಗಿಸಿ ಬಣ್ಣ ಬಳಿದು ಹೊಸ ಸರ್ಕಲ್‌ನ ಲುಕ್ ನೋಡಬಹುದಾಗಿದೆ ನಿರ್ಮಿತಿ ಕೇಂದ್ರ ಎಂದು ಇಂಜಿನಿಯರ್ ನಾಗೇಶ ಕುಲಕರ್ಣಿ ತಿಳಿಸಿದರು.

ಇನ್ಮುಂದೆ ಗಾಂಧಿ ತಾತ ಸದಾ ನೆರಳಲ್ಲಿ ಕಾರಂಜಿ ನೀರಿನ ಲೈಟಿಂಗ್ಸ್ನಲ್ಲಿ ಮಿಂಚಲಿದ್ದಾರೆ. ಮೂರ್ತಿಗೆ ಹೂವಿನ ಹಾರ ಹಾಕಲು ಮೇಲೆ ಏರಲು ಕಬ್ಬಿಣ ಗ್ರಿಲ್ ತೆಗೆದು ಸ್ಟೀಲ್ ಗ್ರಿಲ್ ಏಣಿ ಮಾದರಿಯಲ್ಲಿ ಅಳವಡಿಸಿ ಮತ್ತಷ್ಟು ಮೆರಗು ಬರುವಂತೆ ಮಾಡಲಾಗುತ್ತಿದೆ. ಹೀಗಾಗಿ ರಾಷ್ಟçಪಿತ ಮಹಾತ್ಮಾ ಗಾಂಧಿ ಹೆಸರಿನ ಸರ್ಕಲ್ ಆಕರ್ಷಣೆ ಕೇಂದ್ರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net