ಗಾಂಧಿ ಭಾರತ ವರ್ಷಪೂರ್ತಿ ಆಚರಣೆ

Congress
Published on

ಚಿತ್ರದುರ್ಗ: ಎಐಸಿಸಿಯ ಬೆಳಗಾವಿ ಅಧಿವೇಶನವನ್ನು ಮಹಾತ್ಮ ಗಾಂಧಿ ಅವರು ನಡೆಸಿಕೊಟ್ಟು ಶತಮಾನ ಪೂರೈಸಿದೆ. ಹೀಗಾಗಿ ಗಾಂಧಿ ಭಾರತ ಹೆಸರಿನಡಿ ವರ್ಷಪೂರ್ತಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

ಗಾಂಧಿ ನಡಿಗೆ ಸಿದ್ಧತೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅ. 2ರಿಂದ 2025ರ ಅ. 2ರವರೆಗೂ ವರ್ಷಪೂರ್ತಿ ಪ್ರತಿ ವಾರ್ಡ್, ಗ್ರಾಪಂ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವಿಶೇಷವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳೋಣ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಪಾತ್ಯರಾಜನ್, ಕೆ.ಸಿ.ನಾಗರಾಜ್, ಹಾಲಸ್ವಾಮಿ, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎನ್.ಡಿ.ಕುಮಾರ್, ಆರ್.ಕೆ.ಸರ್ದಾರ್, ಲಕ್ಷ್ಮಿಕಾಂತ್, ಖುದ್ದೂಸ್, ಅನಂತ್, ಅಂಜಿನಪ್ಪ, ಶಿವಣ್ಣ, ಮಂಜುನಾಥ್, ಚೋಟು, ಭೂತಣ್ಣ, ಶಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net