

ಚಿತ್ರದುರ್ಗ: ಸತ್ಯ, ಅಹಿಂಸೆಯನ್ನು ಅಸ್ತ್ರವಾಗಿಸಿಕೊಂಡು ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ಐತಿಹಾಸಿಕ ಕೋಟೆನಗರಿಯಲ್ಲಿ ಇಲ್ಲದಿರುವುದು ನೋವಿನ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಇಮಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೆಸರಿಗಷ್ಟೆ ಗಾಂಧಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ. ಆದರೆ, ಅಲ್ಲಿ ಗಾಂಧಿ ಪ್ರತಿಮೆಯಾಗಲಿ, ಪುತ್ಥಳಿಯಾಗಲಿ ಇಲ್ಲ. ಪ್ರತಿ ವರ್ಷ ಅ. 2ರಂದು ಗಾಂಧಿ ಜಯಂತಿ ಆಚರಿಸಿ, ಸ್ಮರಿಸಿದರೆ ಸಾಲದು. ಜಿಲ್ಲಾಡಳಿತ, ನಗರಸಭೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಗರದ ಮುಖ್ಯ ವೃತ್ತದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.