ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನಾ ಸಭೆ

mysore
Published on

ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಸರ್ವ ಧರ್ಮ ಪ್ರಾರ್ಥನಾ ಸಭೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ನಗರದ ಪುರಭವನ ಆವರಣದ ರಂಗಾಚಾರ್ಲು ಭವನದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ವಿವಿಧ ಧರ್ಮಗಳ ಗುರುಗಳು ತಮ್ಮ ಧರ್ಮದ ಸಂದೇಶ ಬೋಧನೆ ಮಾಡಿದರು.

ಹಿಂದು ಧರ್ಮದಿಂದ ಸ್ವಾಮಿ ಆಘರಾನಂದ ರಾಮಕೃಷ್ಣ ರಾವ್, ಇಸ್ಲಾಂ ಧರ್ಮದಿಂದ ಸೂಫಿ ನೂರಿ ಬಾಬಾ, ಜೈನ ಧರ್ಮದಿಂದ ಸುರೇಶ್‌ಕುಮಾರ್ ಜೈನ್, ಸಿಖ್ ಧರ್ಮದಿಂದ ಸಾವನ್ ಸಿಂಗ್, ಕ್ರೈಸ್ತ ಧರ್ಮ, ಬೌದ್ಧ ಧರ್ಮದ ಧರ್ಮೀಯರಿಂದ ಗಾಂಧೀಜಿ ಅವರ ಆತ್ಮ ಕಥನ ಪಠಣ ಮಾಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ, ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ತಿ.ನರಸೀಪುರ ತಾಲೂಕಿನ ಸಿದ್ದರಾಜು ಪ್ರಥಮ, ಕನಕಗಿರಿ ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ದ್ವಿತೀಯ, ಪುಟ್ಟೇಗೌಡನಹುಂಡಿ ಶಾಲೆಯ ಆರ್.ಸಹನಾ ತೃತೀಯ ಸ್ಥಾನ ಪಡೆದರು.

ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಮರಿಮಲ್ಲಪ್ಪ ಕಾಲೇಜಿನ ನಕ್ಷತ್ರ ಪ್ರಥಮ, ಮಹಾರಾಣಿ ಕಾಲೇಜಿನ ಧನಲಕ್ಷ್ಮೀ ದ್ವಿತೀಯ, ಅನಿಕೇತನ ಪದವಿ ಪೂರ್ವ ಕಾಲೇಜಿನ ಶ್ರಾವ್ಯ ತೃತೀಯ ಸ್ಥಾನ ಪಡೆದರು.

ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೃಷ್ಟಿ ಪ್ರಥಮ, ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಮಮತಾ ದ್ವಿತೀಯ, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಕೃತಿ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಮೂರು ವಿಭಾಗದ ವಿಜೇತರಿಗೆ ಕ್ರಮವಾಗಿ 3 ಸಾವಿರ ರೂ., 2 ಸಾವಿರ ರೂ. ಮತ್ತು 1000 ನಗದು ವಿತರಿಸಲಾಯಿತು. ಶಾಸಕ ತನ್ವೀರ್ ಸೇಠ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net