

ಗಾಂಜಾ ಸೇವಿಸುತ್ತಿದ್ದವರ ವಿರುದ್ಧ ಪ್ರಕರಣ
ಬೆಳಗಾವಿ: ನಗರದ ವಿವಿಧಡೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಂದ್ರ ಬಸ್ ನಿಲ್ದಾಣದ ಬಳಿ ರಮೇಶ ಅರಳಿಕಟ್ಟಿ, ಕಸಾಯಿ ಗಲ್ಲಿ ಬಳಿ ವಕಾರ್‌ಅಹ್ಮದ್ ನಾಯ್ಕವಾಡಿ ಹಾಗೂ ಕೊತ್ವಾಲ್ ಗಲ್ಲಿ ಬಳಿ ಗಾಂಜಾ ಸೇವಿಸುತ್ತಿದ್ದ ರೋಷನ್‌ಜಮೀರ್ ಮುಲ್ಲಾ ಎಂಬಾತನ ಮೇಲೆ ಮಾರ್ಕೆಟ್ ಪೊಲೀಸರು ಹಾಗೂ ವಂಟಮುರಿ ಕಾಲನಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಸಾಹಿಲ್ ದದವಾಡಕರ ಎಂಬಾತನ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.