ಗಾಂಜಾ ಸೇವಿಸುತ್ತಿದ ಆರು ಜನರ ಬಂಧನ

Published on

ಕೊಡಗು: ಸಿದ್ದಾಪುರ ಗಾಂಜಾ ಸೇವನೆ ಮಾಡುತ್ತಿದ್ದ ಆರು ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇಲ್ಲಿಗೆ ಸಮೀಪದ ಕೆಸುವಿನಹಳ್ಳ ಹತ್ತಿರದ ಬಸ್ ತಂಗುದಾಣದಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಂಡಕರೆ ನಿವಾಸಿ ಉಸ್ಮಾನ್(52) ಪಿ.ಎಂ. ಸಂಶುದ್ದೀನ್(44), ನಿರ್ನಾಂಡಿಸ್ ಎಸ್ಟೇಟ್ ನಿವಾಸಿ ಕೆ.ಎಸ್.ಫರೀದ್(55), ಚೆನ್ನಯ್ಯನಕೋಟೆ ನಿವಾಸಿಗಳಾದ ಅಶ್ರಫ್ (33) ಇಬ್ರಾಹಿಂ, (27) ಹನೀಫ್ (36) ಎಂಬುವರನ್ನು ಬಂಧಿಸಿದ್ದಾರೆ.

ಪಿಎಸ್‌ಐ ರಾಘವೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಐ ತಮ್ಮಯ್ಯ, ಸಿಬ್ಬಂದಿ ಲಕ್ಷ್ಮೀಕಾಂತ್, ಸಂತೋಷ್ ಚೌಹಾಣ್, ವಿಠಲ, ರಾಜೇಶ್ವರಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net