

ಬೆಳಗಾವಿ: ನಗರದಲ್ಲಿ 5 ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ್ದ ಐವರನ್ನು ನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೌಫಿಕ್ ಸಯ್ಯದ ಶೇಖ್ (28), ಇರ್ಫಾನ್ ಮೆಹಬೂಬ್ ಬಿಸ್ತಿ (34), ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ಸಾರ್ ಬಾಬಾಜಾನ ಖಾಜಿ (28), ಅಯಾನ್ ಶಫೀವುಲ್ಲಾ ಸೌದಾಗಾರ (18), ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಯಾನ್ ದಸ್ತಗೀರ್ ಮೋಕಾಶಿ(21) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.