ಕಲಬುರಗಿ : ಉಸ್ಮಾನಿಯಾ ಕಾಲನಿಯಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಣಪ್ಪ ಕೋರೆ ಮತ್ತು ಸೂರ್ಯಕಾಂತ ಮೇಲಿನಕೇರಿ ಬಂಧಿತರು. ಕಾಲನಿಯ ಬ್ಯಾಂಕ್ವೆಟ್ ಹಾಲ್ ಹಿಂಭಾಗದಲ್ಲಿ ಗಾಂಜಾ ಸೇವಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಬಂಧನ: ಸಂಗಮೇಶ್ವರ ಕಾಲನಿ ಶಿವ ಮಂದಿರ ಬಳಿ ಜೂಜಾಡುತ್ತಿದ್ದ ನಾಲ್ವರನ್ನು ರಾಘವೇಂದ್ರ ನಗರ ಠಾಣೆ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ೩೩,೫೨೦ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಸಾಕ್ಷಿ ಹೇಳದಂತೆ ಜೀವ ಬೆದರಿಕೆ : ಕಲಬುರಗಿ ಕೋರ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಕೋರ್ಟ್ನಲ್ಲಿ ಸ್ಟೇನೋಗ್ರಾಫರ್ ಆಗಿರುವ ರಮೇಶ ದುರ್ಗಪ್ಪಗೆ ಬೆದರಿಕೆ ಹಾಕಲಾಗಿದೆ. ರಮೇಶ ಸಹೋದರಿ ನೇತ್ರಾವತಿ ಎಂಬುವರನ್ನು ಮುದಗಲ್‌ನ ಚಂದ್ರಣ್ಣ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆಸ್ತಿ ವಿಚಾರವಾಗಿ ಗಂಡನ ಸಂಬAಧಿ ಶಿವರಾಜ ಎಂಬುವರು ಸಹೋದರಿ ಕೊಲೆ ಮಾಡಿದ್ದ. ಈಗ ಆತ ರಾಯಚೂರು ಜೈಲಿನಲ್ಲಿದ್ದು, ಸಾಕ್ಷಿ ಹೇಳದಂತೆ ನಿಂಗಪ್ಪ, ಈರಪ್ಪ, ಲಕ್ಷಿö್ಮÃ ಹಾಗೂ ಗುಬ್ಬಮ್ಮ ಎಂಬುವರು ವಾಹನದಲ್ಲಿ ಬಂದು ಅಡ್ಡಗಟ್ಟಿ ಬೆದರಿಸಿದ್ದಾರೆ. ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.