ಗಾಂಜಾ ಸಾಗಿಸುತ್ತಿದ್ದವನ ಬಂಧನ

Crime Logo
Published on

ಕೊಳ್ಳೇಗಾಲ: ಎರಡು ಲಕ್ಷ ರೂ. ಮೌಲ್ಯದ 2.67 ಕಿಲೋಗ್ರಾಂ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹನೂರು ತಾಲೂಕು ಕುರಟ್ಟಿ ಹೊಸರು ಗ್ರಾಮದ ಮಹದೇವ (47) ಬಂಧಿತ. ಈತ ಪಟ್ಟಣದ ಪ್ರವಾಸಿ ಮಂದಿರದ ಕಾಂಪೌಂಡ್ ಫುಟ್‌ಪಾತ್‌ನಲ್ಲಿ ಬ್ಯಾಗ್ ಹಿಡಿದು ನಿಂತಿದ್ದ ವೇಳೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಅವರು ಸಿಬ್ಬಂದಿಯೊಂದಿಗೆ ಪರಿಶೀಲಿಸಿದ್ದಾರೆ. ಈ ವೇಳೆ 2.67 ಕೆಜಿ ಒಣಗಿದ ಗೊಂಡೆ ಮಿಶ್ರಿತ ಗಾಂಜಾ ಸೊಪ್ಪು ಪತ್ತೆಯಾಗಿದೆ. ಮಾಲು ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ತಖೀವುಲ್ಲಾ, ಹೆಡ್ ಕಾನ್‌ಸ್ಟೆಬಲ್ ರವಿಕುಮಾರ್, ವೆಂಕಟೇಶ್, ಬಿಳಿಗೌಡ, ಎಲ್.ರಾಜೀವ, ಕಾನ್‌ಸ್ಟೆಬಲ್ ಬಸವರಾಜು, ಆನಂದ, ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net