ಗಾಂಜಾ ಸಾಗಿಸುತ್ತಿದ್ದವನ ಬಂಧನ

Crime Logo
Published on

ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಬಡಾವಣೆಯ ಚಾನೆಲ್ ರಸ್ತೆಯಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತಿಮ್ಮರಾಜೀಪುರ ಗ್ರಾಮದ ಹರೀಶ ಅಲಿಯಾಸ್ ಹುಚ್ಚಯ್ಯ( 48) ಬಂಧಿತ. ಬಸ್ತೀಪುರ ಬಡಾವಣೆ ಹಿಂಭಾಗವಿರುವ ಚಾನೆಲ್ ರಸ್ತೆಯಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ವರ್ಷಾ ಹಾಗೂ ಉಪವಿಭಾಗ ಅಪರಾಧ ಪತ್ತೆ ದಳ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಉಪವಿಭಾಗ ಅಪರಾಧ ಪತ್ತೆ ದಳ ಎಎಸ್‌ಐ ತಖೀವುಲ್ಲಾ, ಹೆಡ್‌ಕಾನ್‌ಸ್ಟೇಬಲ್ ಬಿಳಿಗೌಡ , ವೆಂಕಟೇಶ್, ಅನಿಲ್‌ಕುಮಾರ್, ರಾಜು ಮತ್ತಿತರರಿದ್ದರು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net