ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

arrested
Published on

ಬೆಳಗಾವಿ: ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಕಂಗ್ರಾಳಿ ಬಿ.ಕೆ. ಮುಖ್ಯ ರಸ್ತೆಯ ಮನೋಹರ ಅಲಿಯಾಸ್​ ಬಾಳು ಗಜಾನನ ಹುದ್ದಾರ ಬಂಧಿತ ವ್ಯಕ್ತಿ. ಕಾರಿನಲ್ಲಿ ಗಾಂಜಾ ತೆಗೆದುಕೊಂಡು ಬಂದು ಮಾರಾಟ ಮಾಡುವುದಕ್ಕೆ ಹೋಗುತ್ತಿದ್ದಾಗ ಶಾಹೂನಗರ ರಸ್ತೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಪೊಲೀಸರು 3.500 ಕೆ.ಜಿ. ಗಾಂಜಾ, 88,700 ರೂ., ಮಾರುತಿ ಎಸ್ಟೀಮ್​ ಕಾರು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net