ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ

Crime Logo
Published on

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಬಳಿ ಬುಧವಾರ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮುನಿಶೆಟ್ಟಿ ದೊಡ್ಡಿ ಗ್ರಾಮದ ಭಾಗ್ಯರಾಜ್ (42), ಜಾಕೂಬ್ (38) ಹಾಗೂ ಕೌದಳ್ಳಿ ಗ್ರಾಮದ ಅಂತೋಣಿರಾಜ್ (40) ಬಂಧಿತರು. ಈ ಮೂವರು ಬೆಳಗ್ಗೆ 7ರ ವೇಳೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕುರಟ್ಟಿ ಹೊಸೂರು ಕೌದಳ್ಳಿ ಮಾರ್ಗದಲ್ಲಿ ಒಣ ಗಾಂಜಾವನ್ನು ಅಕ್ರಮವಾಗಿ ಬೈಕ್‌ನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ತೆರಳಿ ದಾಳಿ ನಡೆಸಿದಾಗ ಮೂವರು ಸಿಕ್ಕಿ ಬಿದ್ದಿದ್ದಾರೆ. 535 ಗ್ರಾಂ ಒಣ ಗಾಂಜಾ ಹಾಗೂ ಬೈಕ್ ವಶಕ್ಕೆ ಪಡೆದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಲೋಕೇಶ್, ಎಎಸೈ ಲಿಂಗರಾಜು, ಸಿಬ್ಬಂದಿ ಗಿರೀಶ್, ನಾಗರಾಜು, ಚಂದ್ರಶೇಖರ್, ಲಿಯಾಖತ್ ಆಲಿಖಾನ್ ಹಾಗೂ ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net